ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್- ಇಸ್ರೇಲ್ ಯುದ್ಧದ ತೀವ್ರತೆ ಹೆಚ್ಚಾಗಿದೆ. ಸದ್ಯ ಮಧ್ಯಪ್ರಾಚ್ಯದ ಏರ್‌ಸ್ಪೇಸ್‌ಗಳಿಗೆ ನಿರ್ಬಂಧ ವಿಧಿಸಿರುವ ಕಾರಣ ಬೆಂಗಳೂರಿಗೆ ಆಗಮಿಸಬೇಕಿದ್ದ ಒಂಬತ್ತು ಹಾಗೂ ಬೆಂಗಳೂರಿನಿಂದ ಹೊರಡಬೇಕಿದ್ದ 10 ವಿಮಾನಗಳ ಹಾರಾಟ ರದ್ದಾಗಿದೆ.
ಅಬುಧಾನಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ ಹಾಗೂ ದೋಹಾ ಮಾರ್ಗಗಳ ವಿಮಾನ ಹಾರಾಟ ರದ್ದಾಗಿದೆ. ಭದ್ರತಾ ಕಾರಣಗಳು ಹಾಗೂ ಏರ್‌ಸ್ಪೇಸ್ ನಿರ್ಬಂಧದ ಕಾರಣದಿಂದ ಫ್ಲೈಟ್‌ಗಳ ಹಾರಾಟ ಕ್ಯಾನ್ಸಲ್ ಮಾಡಲಾಗಿದೆ.
ಮಧ್ಯಪ್ರಾಚ್ಯಕ್ಕೆ ತೆರಳುವ ಹಾಗೂ ಅಲ್ಲಿಂಗ ಆಗಮಿಸುವ ಜನರಿಗೆ ಕೆಲಕಾಲ ತೊಂದರೆ ಉಂಟಾಗಲಿದೆ.



