ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಾರಾಗೃಹಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಮುಂದಾಗಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಜೈಲಿನಲ್ಲಿ ಕೈದಿಗಳ ಉಟೋಪಚಾರದಲ್ಲೂ ಸಹ ಕೆಲ ಮಹತ್ವದ ಬದಲಾವಣೆ ತಂದಿದ್ದು, ಇದೀಗ ಜೈಲುಗಳಲ್ಲಿರುವ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ರೂಲ್ಸ್ ಮಾಡಿದ್ದಾರೆ.
ಕೈದಿಗಳ ಭೇಟಿಗೆ ಹೊಸ ನಿಯಮಗಳು
- ಕೈದಿಗಳಿಗೆ ಗಂಭೀರ ಅನಾರೋಗ್ಯ, ಗಾಯದಿಂದ ನಡೆಯಲು ಆಗದಿದ್ದಾಗ ತಿಂಗಳಿಗೆ ಒಮ್ಮೆ ಕುಟುಂಬದವರಿಗೆ ಭೇಟಿ ಮಾಡಲು ಅವಕಾಶ
- ಕುಟುಂಬದಲ್ಲಿ ಸಾವು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ವೇಳೆ ಕೈದಿಯನ್ನು ಭೇಟಿ ಮಾಡಿ ಮಾಹಿತಿ ನೀಡಲು ಅವಕಾಶ
- ಶಿಕ್ಷೆ ಮುಗಿದು ಅಥವಾ ಬಿಡುಗಡೆಯ ದಿನಾಂಕದ ಎರಡು ತಿಂಗಳು ಮುಂಚೆ ಕೈದಿ ಜೊತೆ ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಭೇಟಿಗೆ ಅವಕಾಶ
- ಉದ್ಯೋಗ, ವಾಸಸ್ಥಳ, ಸಲಹೆ ಇತ್ಯಾದಿ ವ್ಯವಸ್ಥೆಗಾಗಿ ಸಂದರ್ಶನಕ್ಕೆ ಅವಕಾಶ
- ಕೈದಿಗಳನ್ನ ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಿದ್ದರೆ ತಿಂಗಳಿನಲ್ಲಿ ಒಮ್ಮೆ ಭೇಟಿಗೆ ಅವಕಾಶ
ಇನ್ನು ಈ ರೀತಿ ವಿಶೇಷ ಸಂದರ್ಶನ ಭೇಟಿಗೆ ಮುನ್ನ ಕೆಲ ನಿಯಮಗಳನ್ನು ಸಹ ಪಾಲಿಸಬೇಕೆಂದು ಮಾರ್ಗಸೂಚಿಲ್ಲಿ ತಿಳಿಸಲಾಗಿದೆ.
ಪಾಲಿಸಬೇಕಾದ ನಿಯಮಗಳೇನು?
- ಆಯಾ ಜೈಲು ಮುಖ್ಯಸ್ಥರ ಲಿಖಿತ ಅನುಮತಿ ಕಡ್ಡಾಯ
- ಜೈಲು ಭದ್ರತಾ ಕಾರಣಕ್ಕೆ ಸಿಬ್ಬಂದಿ ತಪಾಸಣೆಗೆ ಸಹಕಾರ ನೀಡಬೇಕು.
- ನಿಗದಿತ ಸಂದರ್ಶನ ಕೊಠಡಿಯಲ್ಲಿ ಮಾತ್ರ ಅವಕಾಶ.
- 30 ನಿಮಿಷಗಳವರೆಗೆ ಮಾತ್ರ ಸಂದರ್ಶನಕ್ಕೆ ಅವಕಾಶ.
- ಒಂದು ಕೈದಿಯನ್ನು ಕೇವಲ ಐದು ಮಂದಿ ಭೇಟಿಗೆ ಅವಕಾಶ
- ಜೈಲು ಅಧಿಕಾರಿಯ ಮೇಲ್ವಿಚಾರಣೆ ಇರಬೇಕು.
- ಭೇಟಿ ನೀಡುವ ಮೊದಲು ಕನಿಷ್ಠ 2 ಕೆಲಸದ ದಿನಗಳ ಮುಂಚೆ ಅರ್ಜಿ ಸಲ್ಲಿಸಬೇಕು.
- ಅತ್ಯವಶ್ಯಕ ಕಾರಣವಿದ್ರೆ ಕಾರಾಗೃಹ DGP ಅನುಮತಿ ಅಗತ್ಯ.
ಇನ್ನು ಒಂದೇ ಜೈಲಿನಲ್ಲಿ ವರ್ಷಾನುಗಟ್ಟಲ್ಲೇ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನೂ ಸಹ ಬೇರೆಗೆ ವರ್ಗಾವಣೆ ಮಾಡುವ ಚಿಂತನೆಗಳು ನಡೆದಿವೆ .



