March 10, 2026
Tuesday, March 10, 2026
spot_img

ಶಾಲೆ-ಕಾಲೇಜುಗಳ ಬಳಿ ಮಾರಾಟ ಆಗ್ತಿರೋ BuzzBallz ಬರೀ ಜ್ಯೂಸಾ? ಇಲ್ಲಾ ಮದ್ಯನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣದಲ್ಲಿ BuzzBallz ಎನ್ನುವ ಡ್ರಿಂಕ್‌ ವೈರಲ್‌ ಆಗಿದೆ. ನೋಡೋಕೆ ಸೇಮ್‌ ಜ್ಯೂಸ್‌ ಪ್ಯಾಕೆಟ್‌ನಂತೆ ಕಾಣುವ ಇದರಲ್ಲಿ ಮದ್ಯ ಮಿಕ್ಸ್‌ ಆಗಿದೆ ಎನ್ನುವ ಆರೋಪ ಬಂದಿದೆ.

ಈ ಪಾನೀಯದಲ್ಲಿ ಸುಮಾರು 15 ಶೇಕಡಾ ಮದ್ಯಾಂಶವಿದೆ, ಇದೇ ಕಾರಣಕ್ಕೆ ಇದು ವಿದ್ಯಾರ್ಥಿಗಳಲ್ಲಿ ಫೇಮಸ್‌ ಆಗಿದೆ ಎನ್ನಲಾಗಿದೆ. ಶಾಲೆ ಹಾಗೂ ಕಾಲೇಜುಗಳ ಬಳಿಯಲ್ಲಿ ಇದರ ಮಾರಾಟ ಜೋರಾಗಿದ್ದು, ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ವಿವಿಧ ಫ್ಲೇವರ್‌ಗಳಲ್ಲಿ ಲಭ್ಯವಾಗುವ ಈ ಪಾನೀಯವು ಜ್ಯೂಸ್ ಅಥವಾ ಎನರ್ಜಿ ಡ್ರಿಂಕ್‌ನಂತೆ ಕಾಣುವುದರಿಂದ ಯುವಕರನ್ನು ಸುಲಭವಾಗಿ ಆಕರ್ಷಿಸುತ್ತದೆ. ಆದರೆ, ಇದರಲ್ಲಿರುವ ಮದ್ಯಾಂಶ ಮತ್ತು ಹೆಚ್ಚು ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.

ಈ ಹಿನ್ನೆಲೆಯಲ್ಲಿ ಆಯೋಗವು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಪಾನೀಯದ ಮಾದರಿಯನ್ನು ಪರೀಕ್ಷಿಸಲು ಸೂಚಿಸಿದೆ. ಅದರಲ್ಲಿರುವ ಮದ್ಯಾಂಶ ಮತ್ತು ಇತರ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ವರದಿ ನೀಡಲು ಐದು ದಿನಗಳ ಗಡುವು ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !