August 28, 2026
Friday, August 28, 2026
spot_img

SAVINGS | ಗ್ಯಾಸ್‌ ಸಿಗತ್ತೋ ಬಿಡತ್ತೋ ಗೊತ್ತಿಲ್ಲ, ಇರೋದನ್ನು ಉಳಿಸೋಕೆ ಈ ರೀತಿ ಮಾಡಿ..

ಇರಾನ್‌-ಇಸ್ರೇಲ್‌ ಸಂಘರ್ಷದ ಮಧ್ಯೆ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೊಟೇಲ್‌ಗಳಲ್ಲಿ ಈಗಾಗಲೇ ಜಾಸ್ತಿ ಗ್ಯಾಸ್‌ ಬೇಕಾಗುವ ತಿಂಡಿಗಳನ್ನು ಬಂದ್‌ ಮಾಡಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಹೊಟೇಲ್‌ಗಳು ಬಂದ್‌ ಆಗಬಹುದು.

ಮನೆಯಲ್ಲಿ ಇರುವ ಗ್ಯಾಸ್‌ ಸಿಲಿಂಡರ್‌ ಹೆಚ್ಚು ದಿನ ಬಾಳಿಕೆ ಬರಬೇಕಾದ್ರೆ ಹೀಗೆ ಮಾಡಿ..

ಅಡುಗೆ ಮಾಡೋಕೆ ಸ್ಟೋವ್‌ ಆನ್‌ ಮಾಡಿ ಜೀರಿಗೆ ಎಲ್ಲಿದೆ, ತರಕಾರಿ ಎಲ್ಲಿದೆ ಎಂದು ಹುಡುಕಬೇಡಿ. ಎಲ್ಲವನ್ನೂ ರೆಡಿ ಮಾಡಿ ಇಟ್ಟುಕೊಂಡು ಒಲೆ ಆನ್‌ ಮಾಡಿ.

ಅಕ್ಕಿ, ಬೇಳೆಯಂಥ ಪದಾರ್ಥಗಳನ್ನು ಬೇಯಿಸೋಕೂ ಮುನ್ನ ನೀರಿನಲ್ಲಿ ನೆನೆಸಿ ಇಡಿ. ಅಡುಗೆ ಬೇಗ ಆಗುತ್ತದೆ.

ಪಾತ್ರೆಯನ್ನು ಮುಚ್ಚಿ ಅಡುಗೆ ಮಾಡಿ, ಸ್ಟೀಮ್‌ನಲ್ಲಿ ಪದಾರ್ಥ ಬೇಯುತ್ತದೆ. ಸಣ್ಣ ಉರಿಯಲ್ಲಿ ಅಡುಗೆ ಮಾಡೋದು ಸೂಕ್ತ. ಗ್ಯಾಸ್‌ ಉಳಿಯುತ್ತದೆ ಜೊತೆಗೆ ಊಟವೂ ರುಚಿಯಾಗಿರುತ್ತದೆ.

ಪಾತ್ರೆಯ ತಳದಲ್ಲಿ ನೀರಿದ್ದರೆ ಒರೆಸಿ ನಂತರ ಒಲೆ ಮೇಲೆ ಇಡಿ, ಫ್ರಿಡ್ಜ್‌ನಿಂದ ತೆಗೆದ ಪದಾರ್ಥವನ್ನು ತಕ್ಷಣ ಬಿಸಿ ಮಾಡಬೇಡಿ. ನಾರ್ಮಲ್‌ ಟೆಂಪರೇಚರ್‌ಗೆ ಬರುವವರೆಗೂ ಕಾಯಿರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !