April 30, 2026
Thursday, April 30, 2026
spot_img

CINE | ರಿಲೀಸ್‌ಗೂ ಮುನ್ನವೇ ‘ಧುರಂಧರ್-2’ ಹವಾ: ಪ್ರೀಮಿಯರ್ ಶೋನಲ್ಲೇ ದಾಖಲೆ ಬರೆದ ರಣವೀರ್ ಸಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಚಿತ್ರದ ಕ್ರೇಜ್ ಗಗನಕ್ಕೇರಿದೆ. ಮಾರ್ಚ್ 18ರಂದು ನಡೆಯಲಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಈಗಾಗಲೇ 3.50 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದು, ಸುಮಾರು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಮುಂಬೈನಲ್ಲಿ ಗರಿಷ್ಠ 3,100 ರೂ. ಹಾಗೂ ಬೆಂಗಳೂರಿನಲ್ಲಿ 2,200 ರೂ. ಇದ್ದರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ರಣವೀರ್ ಸಿಂಗ್ ವೃತ್ತಿಜೀವನದಲ್ಲೇ ಇದು ಅತಿ ವೇಗವಾಗಿ ಟಿಕೆಟ್ ಮಾರಾಟವಾಗುತ್ತಿರುವ ಸಿನಿಮಾವಾಗಿದೆ.

ಕೇವಲ ಪ್ರೀಮಿಯರ್ ಶೋಗಳಿಂದಲೇ 40-50 ಕೋಟಿ ರೂ. ಹಾಗೂ ಮೊದಲ ದಿನವೇ 100 ಕೋಟಿ ರೂ. ಗಳಿಸುವ ಅಂದಾಜಿದೆ.

ಚಿತ್ರದಲ್ಲಿ ರಣವೀರ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಮಾಧವನ್ ಮತ್ತು ಅರ್ಜುನ್ ರಾಮ್‌ಪಾಲ್ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !