September 20, 2026
Sunday, September 20, 2026
spot_img

ಇಷ್ಟೊಂದು ಆತಂಕ ಯಾಕೆ? ಎಲ್‌ಪಿಜಿ ಸಿಲಿಂಡರ್‌ಗೆ ಕೊರತೆ ಇಲ್ಲ ಎಂದ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗ್ಯಾಸ್‌ ಸಿಲಿಂಡರ್‌ ಕಥೆ ಮುಗಿದ ಅಧ್ಯಾಯ ಇನ್ನೇನಿದ್ದರೂ ಇಂಡಕ್ಷನ್‌ ಹಾಗೂ ಕಟ್ಟಿಗೆ ಒಲೆಯೇ ಗತಿ ಎನ್ನುವಂತೆ ಜನ ಗಾಬರಿಯಲ್ಲಿದ್ದಾರೆ. ಆದರೆ ದೇಶದಲ್ಲಿ ಇಂಧನ ಸರಬರಾಜು ಕುರಿತು ಯಾವುದೇ ಆತಂಕ ಬೇಡ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಜನತೆಗೆ ಭರವಸೆ ನೀಡಿದ್ದಾರೆ.

ಇಂಧನ ಸವಾಲುಗಳನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೆ ಇದೇ ವಿಶ್ವಾಸವನ್ನು ನೀಡಲು ಬಯಸುತ್ತಾರೆ ಎಂದು ಹೇಳಿದರು.

ಯುದ್ಧ ಹಲವು ದಿನಗಳಿಂದ ನಡೆಯುತ್ತಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಹಡಗುಗಳ ಮೂಲಕ ಸರಬರಾಜು ನಡೆಯುತ್ತಿದೆ. ಹೀಗಾಗಿ ದೇಶದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಆದರೆ, ಜನರು ಆತಂಕದಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಇರಾನ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧ ಆರಂಭವಾದಾಗಿನಿಂದ ಹೊಟೇಲ್‌ಗಳು ಗ್ಯಾಸ್‌ ಸಿಲಿಂಡರ್‌ ಇಲ್ಲದೆ ಮುಚ್ಚುತ್ತಿವೆ, ಕಾಲೇಜು ಹಾಸ್ಟೆಲ್‌ಗಳು ಹಾಗೂ ಪಿಜಿಗಳಲ್ಲಿ ಪೂರಿ, ದೋಸೆ ಇನ್ನಿತರ ತಿಂಡಿಗಳನ್ನು ಮಾಡುತ್ತಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !