ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸೂಪರ್‌ಸ್ಟಾರ್, ‘ಸಲ್ಲು ಭಾಯ್’ ಅಂದ್ರೆ ಸುಮ್ನೆನಾ? ಬಿಗ್ ಬಾಸ್ ಶೋ ನಡೆಸಿಕೊಡೋ ಅವರ ಶೈಲಿಗೆ ಇಡೀ ದೇಶವೇ ಫ್ಯಾನ್. ಆದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅವರ ವಯಸ್ಸು, ತೂಕ ಮತ್ತೆ ಹೇರ್‌ಸ್ಟೈಲ್ ಬಗ್ಗೆ ಬೇಕಾಬಿಟ್ಟಿ ಟ್ರೋಲ್ ಮಾಡೋಕೆ ಶುರುಮಾಡಿದ್ರು. “ಸಲ್ಮಾನ್ ದಪ್ಪ ಆಗಿಬಿಟ್ಟಿದ್ದಾರೆ, ಮುಪ್ಪಾಗಿದೆ” ಎಂದು ಏನೇನೋ ಕಾಮೆಂಟ್ ಹಾಕ್ತಿದ್ರು. ಆದ್ರೆ ಸಲ್ಲು ಭಾಯ್ ಸುಮ್ನೆ ಇರ್ತಾರಾ? ಈ ಬಾರಿಯ ಬಿಗ್ ಬಾಸ್ ಸೀಸನ್ 20ರ ‘ವೀಕೆಂಡ್ ಕಾ ವಾರ್’ನಲ್ಲಿ ಟ್ರೋಲಿಗರಿಗೆ ಸರಿಯಾದ ಪಂಚ್ ಕೊಟ್ಟಿದ್ದಾರೆ.
ಶೋನಲ್ಲಿ ಗೇಮಿಂಗ್ ಕಮ್ಯುನಿಟಿ ಮೂಲಕ ತಮ್ಮ ವಿರುದ್ಧ ಇಲ್ಲಸಲ್ಲದ ಮಾತಾಡಿದ್ದ ಸ್ಪರ್ಧಿಗಳನ್ನು ಸಲ್ಮಾನ್ ನೇರವಾಗಿಯೇ ಪ್ರಶ್ನಿಸಿದ್ರು. ಆಮೇಲೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡೋರ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ರು. “ಯಾಕೆ ಹೀಗೆ ಟ್ರೋಲ್ ಮಾಡ್ತೀರಾ? ಇದರ ಹಿಂದೆ ಇರೋ ಮನಸ್ಥಿತಿ ಏನು? ನನ್ನ ಮೇಲೂ ಇದು ನಡೀತಾ ಇದೆ. ಭಾಯ್ ದಪ್ಪ ಆಗಿದ್ದಾರೆ ಎಂದು ಕಾಮೆಂಟ್ ಮಾಡ್ತೀರ ಅಲ್ವಾ? ಸರಿ, ಈಗ ಟ್ರೋಲ್ ಮಾಡಿ ನೋಡೋಣ!” ಎಂದು ಸವಾಲ್ ಹಾಕಿದ್ರು.
ಅಷ್ಟೇ ಅಲ್ಲ, ವೇದಿಕೆ ಮೇಲೆಯೇ ತಮ್ಮ ಹ್ಯಾಟ್, ಜಾಕೆಟ್ ಮತ್ತೆ ಟಿ-ಶರ್ಟ್ ಬಿಚ್ಚಿ ತಮ್ಮ ಮೈಕಟ್ಟು ತೋರಿಸಿದ್ರು. ಇದನ್ನ ನೋಡಿ ಮನೆಯಲ್ಲಿದ್ದ ಸ್ಪರ್ಧಿಗಳು ಆಶ್ಚರ್ಯಪಟ್ಟು, ಚಪ್ಪಾಳೆ ತಟ್ಟಿ ಸಪೋರ್ಟ್ ಮಾಡಿದ್ರು. ಆಮೇಲೆ “ಇತರರ ಬಗ್ಗೆ ಕಾಮೆಂಟ್ ಮಾಡೋ ಮೊದಲು ನಿಮನ್ನ ನೀವು ನೋಡ್ಕೊಳ್ಳಿ. ನಿಮ್ಮ ಮತ್ತೆ ನಿಮ್ಮ ಪೋಷಕರ ಆರೋಗ್ಯದ ಕಡೆ ಗಮನ ಕೊಡಿ” ಎಂದು ಖಡಕ್ ಆಗಿ ಬುದ್ಧಿ ಮಾತು ಹೇಳಿದ್ರು.
ಒಟ್ಟಿನಲ್ಲಿ, ಟ್ರೋಲ್ ಮಾಡೋರಿಗೆ ತಮ್ಮ ಫಿಟ್‌ನೆಸ್ ಮುಖಾಂತರವೇ ಉತ್ತರ ಕೊಟ್ಟು ಸಲ್ಲು ಭಾಯ್ ಮತ್ತೆ ತಾವು ಯಾಕೆ ‘ರಿಯಲ್ ದಬಂಗ್’ ಎಂದು ಪ್ರೂವ್ ಮಾಡಿದ್ದಾರೆ.



