March 13, 2026
Friday, March 13, 2026
spot_img

ಕಾವ್ಯ ಮಾರನ್‌ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್‌ನ ಎಕ್ಸ್‌ ಖಾತೆ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಾಜಿನಲ್ಲಿ ಪಾಕಿಸ್ತಾನಿ ಪ್ಲೇಯರ್‌ನ್ನು ಖರೀದಿಸಿದ್ದಕ್ಕೆ ಸನ್‌ರೈಸರ್ಸ್‌ನ ಓನರ್‌ ಕಾವ್ಯಾ ಮಾರನ್‌ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ.

ಹಂಡ್ರೆಡ್ ಲೀಗ್ 2026ರ ಹರಾಜಿನಲ್ಲಿ ಕಾವ್ಯಾ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ಇದೀಗ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಮೂಲದ ಫ್ರಾಂಚೈಸಿಯು ಪಾಕಿಸ್ತಾನದ ಆಟಗಾರನನ್ನು ಖರೀದಿಸಿರುವುದಕ್ಕೆ ಭಾರತದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸನ್‌ರೈಸರ್ಸ್ ಲೀಡ್ಸ್‌ನ X ಖಾತೆಯನ್ನು ಅಮಾನತುಗೊಳಿಸಲಾಗಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ಸಂಘರ್ಷ ಇರುವುದರಿಂದ ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಇಂಡಿಯನ್ ಪ್ರೀಮಿಯರ್‌ ಲೀಗ್‌ನಿಂದ ನಿಷೇಧಿಸಲಾಗಿದೆ. ಹೀಗಿದದ್ದರೂ ಭಾರತೀಯ ಮೂಲದ ಫ್ರಾಂಚೈಸಿಯು ಹಂಡ್ರೆಡ್‌ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರನನ್ನು ಖರೀದಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ₹2.34 ಕೋಟಿ ಕೊಟ್ಟು ಖರೀದಿಸಿದೆ.

ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ತಂಡ ಆಯ್ಕೆ ಮಾಡಿರುವುದರಿಂದ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಅಭಿಮಾನಿಗಳು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್‌ನಿಂದ ಬಹಿಷ್ಕರಿಸಬೇಕೆಂದು ಕರೆ ನೀಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !