September 28, 2026
Monday, September 28, 2026
spot_img

ದುರಂತೋ ಎಕ್ಸ್‌ಪ್ರೆಸ್‌ಗೆ ಬಾಂಬ್ ಬೆದರಿಕೆ: ಬಂಗಾರಪೇಟೆಯಲ್ಲಿ ತುರ್ತು ತಪಾಸಣೆ, ಶಂಕಿತ ಅರೆಸ್ಟ್

ಹೌರಾ–ಬೆಂಗಳೂರು ಎಸ್‌ಎಂವಿಟಿ ದುರಂತೋ ಎಕ್ಸ್‌ಪ್ರೆಸ್‌ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರೈಲನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ತುರ್ತುವಾಗಿ ನಿಲ್ಲಿಸಿ ಸಂಪೂರ್ಣ ತಪಾಸಣೆ ನಡೆಸಿದ್ದಾರೆ.

ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ರೈಲಿನ ಪ್ರತಿಯೊಂದು ಬೋಗಿಯನ್ನು ಪರಿಶೀಲಿಸಿದರು.

ಪ್ರಾಥಮಿಕ ತನಿಖೆಯಲ್ಲಿ ಬೆದರಿಕೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ರೈಲ್ವೆ ಸಿಬ್ಬಂದಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ರೈಲಿನಲ್ಲಿ ಪ್ರಯಾಣಿಕನೊಂದಿಗೆ ಉಂಟಾದ ವೈಯಕ್ತಿಕ ಕಲಹದ ಬಳಿಕ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

Must Read