March 14, 2026
Saturday, March 14, 2026
spot_img

ದಿನಭವಿಷ್ಯ: ವಿದ್ಯಾರ್ಥಿಗಳಿಗೆ ಇವತ್ತು ಬೆಸ್ಟ್ ಡೇ, ನಿಮ್ಮ ಹಠಮಾರಿ ಸ್ವಭಾವ ಬಿಟ್ಟುಬಿಡಿ

ಮೇಷ
ಅನ್ಯರ ದುರ್ವರ್ತನೆ ನಿಮ್ಮ ದಿನ ಕೆಡಿಸಲು ಅವಕಾಶ ಕೊಡಬೇಡಿ. ಅದರಿಂದ ವಿಮುಖರಾಗಿ ನಿಲ್ಲಿ. ದೈಹಿಕ ನೋವು ಇದ್ದವರಿಗೆ ನಿರಾಳತೆ.
ವೃಷಭ
ನಿಮ್ಮ ಉದ್ದೇಶಕ್ಕೆ ಹಿರಿಯರ ಅನುಮತಿ ಸಿಗಲಿದೆ. ಅದರಿಂದ ನಿಮ್ಮ ಒತ್ತಡ ನಿವಾರಣೆ. ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ಪ್ರತಿಫಲ ಲಭ್ಯ.
ಮಿಥುನ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ ಸಂಭವ. ನಿಮ್ಮಿಂದ ತಪ್ಪಾದರೆ ಬೇಗ ಸರಿ ಪಡಿಸಿಕೊಳ್ಳಿ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ.
ಕಟಕ
ಕೆಲ ವಿಷಯ ಚಿಂತೆಗೆ ಕಾರಣವಾಗಲಿದೆ. ನಿಮಗೆ ಪೂರಕವಾಗಿ ಸಾಗುವುದಿಲ್ಲ. ತಾಳ್ಮೆಯಿಡಿ, ಬೇಗನೆ ಎಲ್ಲ ಸರಿಹೋಗಲಿದೆ. ಬಳಿಕ ನಿಮ್ಮ ಗುರಿ ಸಾಧನೆ.
ಸಿಂಹ
ಇಂದು ಸಾಧಾರಣ ಯಶಸ್ಸು ಪಡೆಯುವಿರಿ. ಉದ್ದೇಶವು ಪೂರ್ಣ ಸಫಲವಾಗದು. ಬಂಧು ಅಸಹಕಾರ. ಹಣದ ವಿಚಾರದಲ್ಲಿ ಅತೃಪ್ತಿ.
ಕನ್ಯಾ
ಆಪ್ತರ ಸಂಗದಲ್ಲಿ ಹರ್ಷೋಲ್ಲಾಸ. ಬಂಧು ಭೇಟಿ. ಆರ್ಥಿಕ ಸಂಕಷ್ಟ ನಿವಾರಣೆ. ವಿದ್ಯಾರ್ಥಿಗಳಿಗೆ ನಿರಾಳತೆ. ಶೈಕ್ಷಣಿಕೆ ಪ್ರಗತಿ.
ತುಲಾ
ಕಠಿಣ ನಿರ್ಧಾರ ತಾಳಬೇಕಾಗಿ ಬಂದರೆ ಹಿಂಜರಿಯಬೇಡಿ. ಬೇರೆಯವರು ಏನು ತಿಳಿದುಕೊಂಡಾರು ಎಂಬ ಭಾವನೆ ತ್ಯಜಿಸಿ.
ವೃಶ್ಚಿಕ
ಆತ್ಮೀಯ ಸಂಬಂಧ ಹಾಳಾಗಲು ಅವಕಾಶ ಕೊಡಬೇಡಿ. ನೀವೇ ಬಗ್ಗಿದರೂ ಪರವಾಗಿಲ್ಲ. ಹಠಮಾರಿ ಧೋರಣೆ ಕೆಟ್ಟದ್ದನ್ನೇ ಮಾಡಬಹುದು.
ಧನು
ಹಣದ ವಿಚಾರದಲ್ಲಿ ಹೆಚ್ಚು ಶಿಸ್ತು ಪಾಲಿಸಿ. ಗಳಿಕೆ ಮತ್ತು ವೆಚ್ಚದ ಮಧ್ಯೆ ಸಮತೋಲನ ಇರಲಿ. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕುವಿರಿ.
ಮಕರ
ಆರ್ಥಿಕ ಅಸ್ಥಿರತೆ. ಪಾಲುದಾರರ ಜತೆ ಭಿನ್ನಮತ. ಸಣ್ಣ ವಿಷಯವು ಚಿಂತೆಗೆ ಕಾರಣವಾಗುವುದು. ವಿದ್ಯಾರ್ಥಿಗಳಿಗೆ ಯಶ.
ಕುಂಭ
ಸಂಬಂಧದಲ್ಲಿ ಬಿರುಕು ಉಂಟಾದೀತು. ಅದನ್ನು ದೀರ್ಘ ಎಳೆಯಬೇಡಿ. ಮುಖ್ಯ ಕೆಲಸ ಪೂರೈಸಲು ಕಾಲವ್ಯಯ ಮಾಡಬೇಡಿ.
ಮೀನ
ಆತುರದ ಕ್ರಮ ತೆಗೆದುಕೊಳ್ಳಬೇಡಿ. ದೊಡ್ಡ ಪರಿಣಾಮ ಉಂಟಾದೀತು. ಏಕಾಂಗಿಗಳಿಗೆ ವಿವಾಹ ಸಂಬಂಧ. ವಿದ್ಯಾರ್ಥಿಗಳಿಗೆ ತುಸು ಕಠಿಣ ದಿನ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !