ಮೇಷ
ಆತ್ಮೀಯರ ವರ್ತನೆ ಯಲ್ಲಿ ಬದಲಾವಣೆ ಕಂಡೀತು. ವಾಗ್ವಾದದಿಂದ ದೂರವಿರಿ. ಪ್ರವಾಸ ಅವಕಾಶ. ಬೆನ್ನು ನೋವು ಇದ್ದವರಿಗೆ ನಿರಾಳತೆ.
ವೃಷಭ
ಉದ್ಯೋಗದ ಹುಡುಕಾಟ ಅಂತ್ಯ. ಶುಭ ಸುದ್ದಿ ಸಿಗಲಿದೆ. ದಂಪತಿ ಮಧ್ಯೆ ಕಲಹವಾದೀತು. ಬಿಪಿ, ಮಧುಮೇಹ ಇದ್ದವರು ಎಚ್ಚರ ವಹಿಸಿ.
ಮಿಥುನ
ವೃತ್ತಿ ಮತ್ತು ಪ್ರೀತಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ. ಸರಿಯಾದ ಹೆಜ್ಜೆ ಇಟ್ಟರೆ ಸಫಲತೆ. ಆತ್ಮೀಯ ವ್ಯಕ್ತಿಗಳ ಮನ ನೋಯಿಸಬೇಡಿ.
ಕಟಕ
ಸರಿಯಾದ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಸಾಗುತ್ತದೆ. ಕುಟುಂಬಸ್ಥರ ಮಧ್ಯೆ ಹೆಚ್ಚು ಸಮಯ ಕಳೆಯಿರಿ. ಅವರ ಮನಸ್ಸಿಗೆ ನೋವು ಉಂಟುಮಾಡಬೇಡಿ.
ಸಿಂಹ
ನಿಮ್ಮ ಧೋರಣೆಗೆ ಮನೆಯವರಿಂದ ವಿರೋಧ. ಬಾಕಿ ಉಳಿದ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಕ್ರೀಡಾಳು ಗಳಿಗೆ ಸಾಧನೆಯ ಯಶ.
ಕನ್ಯಾ
ಅತಿಯಾದ ನಿರೀಕ್ಷೆ ಫಲ ನೀಡದು. ಖಾಸಗಿ ಬದುಕಿನ ಕುರಿತು ಅನವಶ್ಯ ಚಿಂತಿಸುವಿರಿ. ನಿಜವಾಗಿ ಸಮಸ್ಯೆ ಕಾಡದು. ವಿವಾದ ವೊಂದು ಪರಿಹಾರ.
ತುಲಾ
ವ್ಯಕ್ತಿಯೊಬ್ಬರು ನಿಮ್ಮ ಬದುಕಿನಲ್ಲಿ ಪ್ರವೇಶಿಸುವರು. ಅವರ ಜತೆ ಸಖ್ಯ ವೃದ್ಧಿ. ಸಂಘಟಿತ ಕಾರ್ಯದಿಂದ ವ್ಯವಹಾರ ಬೆಳವಣಿಗೆ ಕಾಣುವುದು.
ವೃಶ್ಚಿಕ
ಎಲ್ಲ ಕಾರ್ಯ ಸುಸೂತ್ರವಾಗಿ ಸಾಗಲಿದೆ. ಅಡ್ಡಿಗಳ ನಿವಾರಣೆ. ವೃತ್ತಿ ಸಂಬಂಧಿತ ಉದ್ವಿಗ್ನತೆ ಶಮನ. ಆಪ್ತರ ಜತೆಗಿನ ವಿರಸ ಅಂತ್ಯ.
ಧನು
ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ವ್ಯಸ್ತ. ಉಳಿದವರ ಜತೆ ಹೊಂದಾಣಿಕೆ ಇರಲಿ. ಸಣ್ಣ ಗಾಯದ ಸಾಧ್ಯತೆಯಿದೆ, ಎಚ್ಚರ ವಹಿಸಿ.
ಮಕರ
ಬದುಕನ್ನು ಗಂಭೀರವಾಗಿ ಪರಿಗಣಿಸಿ. ಬೇಕಾಬಿಟ್ಟಿ ಧೋರಣೆ ಪ್ರತಿಕೂಲವಾದೀತು. ಇತರರಿಗೆ ಮಾನಸಿಕ ನೋವು ನೀಡಬೇಡಿ.
ಕುಂಭ
ಖಾಸಗಿ ಸಮಸ್ಯೆ ಮನಸ್ಸಿಗೆ ಕಿರಿಕಿರಿ ತರಲಿದೆ. ಸಣ್ಣ ವಿಷಯದಲ್ಲೂ ತಪ್ಪು ಹುಡುಕುವಿರಿ. ವಿರಸ ಉಂಟಾದೀತು. ಅನಿರೀಕ್ಷಿತ ಧನಲಾಭ ಸಂಭವ.
ಮೀನ
ಹಣದ ವ್ಯವಹಾರ ದಲ್ಲಿ ಜಾಗ್ರತೆ ವಹಿಸಿ. ನಷ್ಟ ಆಗದಂತೆ ನೋಡಿಕೊಳ್ಳಿ. ಮನೆಯವರ ಬೆಂಬಲ ವಿಶ್ವಾಸ ಹೆಚ್ಚಿಸಲಿದೆ. ಪ್ರವಾಸ ಸಂಭವ.



