March 16, 2026
Monday, March 16, 2026
spot_img

ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದಿಂದ ಬಾಬಿ ಚೆಮ್ಮಣೂರಿಗೆ ಗೌರವ ಅಭಿನಂದನೆ

ಹೊಸದಿಗಂತ ವರದಿ ಮಂಗಳೂರು:

ಪ್ರೀತಿಯಿಂದ “ಬೋಚೆ” ಎಂದು ಕರೆಯಲ್ಪಡುವ ಡಾ.ಬಾಬಿ ಚೆಮ್ಮಣೂರು ಅವರನ್ನ ಕರ್ನಾಟಕ ವಿಧಾನಸಭೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದಿಂದ ಗೌರವಿಸಿ ಅಭಿನಂದಿಸಲಾಯಿತು. ವಿಧಾನಸಭೆಯ ಸಬಾಧ್ಯಕ್ಷರಾದ ಯು.ಟಿ.ಖಾದರ್ ನೇತೃತ್ವದಲ್ಲಿ ಬೋಚೆ ಅವರನ್ನು ಗೌರವಿಸಲಾಯಿತು.

ವಿಶ್ವ ಶಾಂತಿಯ ಸಂದೇಶವನ್ನು ಹರಡುವ ಉದ್ದೇಶದಿಂದ ಬೋಚೆ ಅವರು 812 ಕಿಲೋಮೀಟರ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ,ಯುನಿಕ್ ವರ್ಲ್ಡ್ ರೆಕಾರ್ಡ್ ಹಾಗೂ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧಿಸಿದ್ದರು.

163 ವರ್ಷಗಳ ವಿಶ್ವಾಸಾರ್ಹ ಪರಂಪರೆಯನ್ನು ಹೊಂದಿರುವ ವಾಣಿಜ್ಯ ವ್ಯವಹಾರ ಗುಂಪಿನ ನಾಲ್ಕನೇ ತಲೆಮಾರಿನ ನಾಯಕರಾಗಿ ಬೋಚೆ ಮುನ್ನಡೆಯುತ್ತಿದ್ದು, ದೃಷ್ಟಿವಂತ ಉದ್ಯಮಿ, ಸಮಾಜಸೇವಕ, ಕ್ರೀಡಾಪಟು, ಪ್ರೇರಣದಾಯಕ ವಕ್ತಾರ ಹಾಗೂ ಮನರಂಜಕರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸೌದಿ ಜೈಲಿನಲ್ಲಿ ಮರಣದಂಡನೆ ಎದುರಿಸುತ್ತಿದ್ದ ನಿರಪರಾಧಿ ಅಬ್ದುಲ್ ರಹೀಮ್ ಅವರನ್ನು ಉಳಿಸಲು ಬೋಚೆ ಅವರು ₹34 ಕೋಟಿ ‘ಬ್ಲಡ್ ಮನಿ’ ಕ್ರೋಢೀಕರಿಸಿದಲ್ಲದೆ,ಅದರಲ್ಲಿ ₹1 ಕೋಟಿ ರೂಪಾಯಿಯನ್ನು ತಮ್ಮ ವೈಯಕ್ತಿಕ ಖಾತೆಯಿಂದ ನೀಡಿದ್ದರು.ಸಮಾಜ ಸೇವೆಗೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಮದರ್ ಥೆರೆಸಾ ಪ್ರಶಸ್ತಿಯೂ ಸೇರಿದಂತೆ 216 ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳು ಬೋಚೆ ಅವರಿಗೆ ಲಭಿಸಿವೆ.

ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್,ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ,ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಕೊಡಗು ಶಾಸಕ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಪೊನ್ನಣ್ಣ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !