ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಕ್ಕಿಪಿಕ್ಕಿ ಸಮುದಾಯದ 20 ವರ್ಷದ ಯುವತಿಯನ್ನು ವಿದೇಶದಲ್ಲಿ ಮಾನವ ಕಳ್ಳಸಾಗಣೆ ಜಾಲಕ್ಕೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಯುವತಿಯ ಪೋಷಕರ ಮೇಲೆಯೇ ಆರೋಪ ಮೂಡಿದೆ.
ಸೆನೆಗಲ್ನಲ್ಲಿ ರಕ್ಷಣೆ
ಗಿಡಮೂಲಿಕೆ ವ್ಯಾಪಾರಕ್ಕಾಗಿ ಕುಟುಂಬದೊಂದಿಗೆ ಪಶ್ಚಿಮ ಆಫ್ರಿಕಾದ ಸೆನೆಗಲ್ಗೆ ತೆರಳಿದ್ದ ಯುವತಿ, ಪರಿಚಯಸ್ಥರ ಮೂಲಕ ತನ್ನ ಪರಿಸ್ಥಿತಿಯನ್ನು ತಿಳಿಸಿ ಸಹಾಯ ಕೋರಿದ್ದಳು. ಬಳಿಕ ಭಾರತದ ರಾಯಭಾರ ಕಚೇರಿ ಹಾಗೂ ಸ್ಥಳೀಯ ಅಧಿಕಾರಿಗಳ ನೆರವಿನಿಂದ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇದನ್ನೂ ಓದಿ:
ನ್ಯಾಯಕ್ಕೆ ಆಗ್ರಹ
ಪ್ರಕರಣ ಬೆಳಕಿಗೆ ಬಂದ ಬಳಿಕ ಪೋಷಕರು ಭಾರತಕ್ಕೆ ಮರಳಿದ್ದಾರೆ. ಯುವತಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಸಂಘಟನೆ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಮನವಿ ಮಾಡಿದೆ.



