ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಸಭಾ ಚುನಾವಣೆಗೆ ಕೇರಳ ಸಜ್ಜಾಗುತ್ತಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿದು ರಣತಂತ್ರ ರೂಪಿಸುತ್ತಿದೆ. ಆಡಳಿತದಲ್ಲಿರುವ ಸಿಪಿಐ ಮತ್ತೊಮ್ಮೆ ಅಧಿಕಾರಕ್ಕೇರಲು ಕಸರತ್ತು ನಡೆಸುತ್ತಿದ್ದು, ಇದರ ಬೆನ್ನಿಗೆ ಉಚ್ಚಾಟನೆಗೊಂಡಿದ್ದ ಶಾಸಕ ಸಿ.ಸಿ.ಮುಕುಂದನ್ ಬಿಜೆಪಿಗೆ ಸೇರುವ ಮೂಲಕ ಶಾಕ್ ನೀಡಿದ್ದಾರೆ.
ಇಂದು ತ್ರಿಶೂರ್‌ನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿಐನಿಂದ ಉಚ್ಚಾಟನೆಗೊಂಡಿದ್ದ ಶಾಸಕ ಸಿ.ಸಿ.ಮುಕುಂದನ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಎಸ್‌ಸಿ-ಮೀಸಲಾತಿ ನಟ್ಟಿಕಾ ಕ್ಷೇತ್ರದ ಶಾಸಕರಾಗಿದ್ದ ಮುಕುಂದನ್ ಅವರನ್ನು ವಿಧಾನಸಭಾ ಚುನಾವಣೆಗೆ ಆಯ್ಕೆ ಮಾಡದೇ ಸಿಪಿಐ ಪಕ್ಷ ಕಡೆಗಣಿಸಿದ್ದು, ಇದರಿಂದ ಅಸಮಾಧಾನಗೊಂಡು ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಹೀಗಾಗಿ ಅವರನ್ನು ಉಚ್ಚಾಟಿಸಲಾಗಿತ್ತು.
ಇದರ ಬೆನ್ನಲ್ಲೇ ಕಾಂಗ್ರೆಸ್ ಮುಕುಂದನ್ ಸೆಳೆಯಲು ಯತ್ನಿಸಿದ್ದು, ಆದರೆ ಯತ್ನಗಳು ಫಲ ನೀಡದ ಕಾರಣ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.



