October 11, 2026
Sunday, October 11, 2026
spot_img

ತಾರಕಕ್ಕೇರಿದ ಅಫ್ಘಾನ್-ಪಾಕ್ ಸಂಘರ್ಷ | ಕಾಬೂಲ್ ಆಸ್ಪತ್ರೆ ಮೇಲೆ ದಾಳಿ: 400 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಕಾಬೂಲ್‌ನ ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ನೂರಾರು ಮಂದಿ ಸಾವನ್ನಪ್ಪಿರುವುದಾಗಿ ತಾಲಿಬಾನ್ ಸರ್ಕಾರ ಆರೋಪಿಸಿದೆ.

ತಾಲಿಬಾನ್ ಹೇಳಿಕೆಯ ಪ್ರಕಾರ, ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ‘ಓಮಿದ್’ ಆಸ್ಪತ್ರೆ ಭಾರೀ ಹಾನಿಗೊಳಗಾಗಿದೆ. ಮಾದಕ ವ್ಯಸನಿಗಳ ಚಿಕಿತ್ಸೆಗೆ ಮೀಸಲಾದ ಈ ದೊಡ್ಡ ಆಸ್ಪತ್ರೆಯ ಬಹುತೇಕ ಭಾಗಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಇನ್ನೊಂದೆಡೆ, ಪಾಕಿಸ್ತಾನ ಈ ಆರೋಪವನ್ನು ಖಂಡಿಸಿದ್ದು, ತಮ್ಮ ದಾಳಿಗಳು ಕೇವಲ ಭಯೋತ್ಪಾದಕ ಗುಂಪುಗಳ ನೆಲೆಗಳನ್ನು ಗುರಿಯಾಗಿಸಿಕೊಂಡದ್ದೇ ಹೊರತು ನಾಗರಿಕ ಪ್ರದೇಶಗಳ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ ಕೆಲವು ವಾರಗಳಿಂದ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಅಫ್ಘಾನಿಸ್ತಾನ ತನ್ನ ಸಾರ್ವಭೌಮತ್ವ ಉಲ್ಲಂಘನೆ ಆಗಿದೆ ಎಂದು ಹೇಳುತ್ತಿದ್ದರೆ, ಪಾಕಿಸ್ತಾನ ಭದ್ರತಾ ಕಾರಣಗಳನ್ನು ಮುಂದಿರಿಸಿದೆ.

Must Read