August 27, 2026
Thursday, August 27, 2026
spot_img

SHOCKING | ಕಸಿನ್‌ಗೆ ವಿಡಿಯೋ ಮಾಡುವಂತೆ ಹೇಳಿ ಎದೆಗೆ ಗುಂಡು ಹೊಡೆದುಕೊಂಡ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿನಿಮಾಗಳಲ್ಲಿ ತೋರಿಸುವ ಹಾಗೆ ಗನ್‌ಗೆ ಬುಲೆಟ್‌ ಹಾಕಿಕೊಂಡು ತನ್ನ ಎದೆಗೆ ಗನ್‌ ಇಟ್ಟು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಪೂರ್ವ ದೆಹಲಿಯ ದಲ್ಲುಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಹತ್ತಿರದ ಕಸಿನ್‌ ಕೈಯಲ್ಲಿ ಫೋನ್‌ ನೀಡಿ ವಿಡಿಯೋ ಮಾಡುವಂತೆ ಹೇಳಿ, ಎದೆಗೆ ಗನ್‌ ಹೊಡೆದುಕೊಂಡು ಮೃತಪಟ್ಟಿದ್ದಾರೆ. ರೀಲ್ಸ್‌ ಮಾಡುವಾಗ ಗನ್‌ ಮಿಸ್‌ಫೈರ್‌ ಆಗಿದೆ ಎಂದು ಹೇಳಲಾಗಿದೆ.

ಪವನ್‌ ಕುಮಾರ್‌ ಎಂಬ ಯುವಕ ತನ್ನ ಕಸಿನ್‌ ಹಿಮಾಂಶುಗೆ ಫೋನ್‌ ನೀಡಿ ವಿಡಿಯೋ ಮಾಡು ಎಂದಷ್ಟೇ ಹೇಳಿದ್ದಾರೆ. ಯಾವುದೋ ರೀಲ್ಸ್‌ ಅಥವಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್‌ ಮಾಡೋಕೆ ಮಾಡ್ತಿದ್ದಾರೆ ಎಂದು ತಿಳಿದುಕೊಂಡ ಹಿಮಾಂಶು ವಿಡಿಯೋ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಪವನ್ ಲೈಸೆನ್ಸ್ ಹೊಂದಿದ ಪಿಸ್ತೂಲ್‌ಗೆ ಮದ್ದುಗುಂಡು ಹಾಕುತ್ತಿರುವುದು ಕಾಣುತ್ತದೆ. ಈ ವೇಳೆ ಹಿಮಾಂಶು ಅವನಿಗೆ ಶಸ್ತ್ರವನ್ನು ಹೇಗೆ ಬಳಸಬೇಕು ಎಂದು ಸಲಹೆ ನೀಡುತ್ತಾ, ಗುಂಡು ಹಾರಿಸಬೇಡ ಎಂದು ಎಚ್ಚರಿಸುತ್ತಿರುವುದು ಕೇಳಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಪವನ್ ಪಿಸ್ತೂಲ್ ನ್ನು ತನ್ನ ಎಡ ಎದೆಭಾಗಕ್ಕೆ ಇಟ್ಟು, ಕ್ಯಾಮೆರಾ ಕಡೆ ಸ್ವಲ್ಪ ನೋಡಿದ ಬಳಿಕ ಟ್ರಿಗರ್ ಒತ್ತುತ್ತಾನೆ. ಇದರಿಂದ ನೆಲಕ್ಕೆ ಕುಸಿಯುತ್ತಾನೆ, ಹಿಮಾಂಶು ಬೆಚ್ಚಿಬಿದ್ದಂತೆ ಪ್ರತಿಕ್ರಿಯಿಸುತ್ತಾನೆ.

ತಕ್ಷಣವೇ ಪವನ್‌ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಎದೆಗೆ ತೀವ್ರವಾದ ಹೊಡೆತ ಬಿದ್ದಿದ್ದು ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !