March 17, 2026
Tuesday, March 17, 2026
spot_img

Gen-zಗಳು ಕೂಲ್ ಅನ್ನೋದು ಇದಕ್ಕೆ: ವಿಡಿಯೋ ಕಾಲ್ ಮೀಟಿಂಗ್‌ನಲ್ಲಿ ಫೇಸ್ ಪ್ಯಾಕ್ ಹಾಕೊಂಡು ಬಂದ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಚೇರಿ ಶಿಸ್ತು, ಡ್ರೆಸ್ ಕೋಡ್ ಎನ್ನುವ ಸಂಪ್ರದಾಯಗಳಿಗೆ ಸವಾಲು ಎಸೆಯುವ ರೀತಿಯಲ್ಲಿ ಜೆನ್‌ಝಿ ಉದ್ಯೋಗಿಯೊಬ್ಬಳ ವರ್ತನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ಕಾಲ್ ಮೀಟಿಂಗ್ ವೇಳೆ ಜೆನ್‌ಝಿ ಉದ್ಯೋಗಿಯೊಬ್ಬಳು ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡೇ ಪ್ರಾಜೆಕ್ಟ್ ಪ್ರೆಸೆಂಟೇಶನ್ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರಿಮೋಟ್‌ಸ್ಟಾರ್ ಕಂಪನಿಯ ಈ ಯುವತಿ, ಮುಖಕ್ಕೆ ಬೇವಿನ ಪೇಸ್ ಪ್ಯಾಕ್ ಹಚ್ಚಿಕೊಂಡು, ತಲೆಗೆ ಟವಲ್ ಸುತ್ತಿಕೊಂಡೇ ಮೀಟಿಂಗ್‌ಗೆ ಹಾಜರಾಗಿದ್ದಳು. ಅದ್ರಲ್ಲೂ ಸಿಇಒ ಮುಂದೆ ಆತ್ಮವಿಶ್ವಾಸದಿಂದ ಪ್ರಾಜೆಕ್ಟ್ ವಿವರಿಸುತ್ತಾ, ಮಧ್ಯೆ ಮಧ್ಯೆ ಜ್ಯೂಸ್ ಕುಡಿಯುತ್ತಾ ಪ್ರೆಸೆಂಟೇಶನ್ ನೀಡಿದ್ದಾಳೆ. ಸಹೋದ್ಯೋಗಿಗಳು ನಗು ತಡೆಯಲು ಹರಸಾಹಸ ಪಟ್ಟರೂ, ಆಕೆ ಮಾತ್ರ ಏನೂ ಆಗದಂತೆ ಕೂಲ್ ಆಗಿ ವರ್ತಿಸಿದ್ದಳು.

ಇದನ್ನೂ ಓದಿ:

ಇಷ್ಟೇ ಅಲ್ಲ ಬಾಸ್‌ಗೆ ಪ್ರ್ಯಾಂಕ್ ಮಾಡಲು ತಂಡವೇ ಸೇರಿ ಮಾಡಿದ ಪ್ಲಾನ್ ಇದಾಗಿತ್ತು. ಎಲ್ಲರೂ ಸಿಇಒ ಕೋಪಗೊಳ್ಳುತ್ತಾರೆ ಎಂದುಕೊಂಡಿದ್ದರೆ, ಅವರ ಪ್ರತಿಕ್ರಿಯೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಕೋಪ ತೋರಿಸುವ ಬದಲು, “ಇದು ಯಾವ ಫೇಸ್ ಮಾಸ್ಕ್?” ಎಂದು ನಗುತ್ತಲೇ ಕೇಳಿದ ಸಿಇಒ, ಪರಿಸ್ಥಿತಿಯನ್ನು ಹಾಸ್ಯಮಯವಾಗಿ ತಿರುಗಿಸಿದರು. ಇದರಿಂದ ತಮಾಷೆ ಮಾಡಲು ಹೋಗಿದ್ದವರೇ ಶಾಕ್ ಆದರು.

ಈ ವಿಡಿಯೋ ಈಗ ಕೋಟ್ಯಂತರ ವೀಕ್ಷಣೆ ಪಡೆದು ಸಖತ್ ವೈರಲ್ ಆಗಿದೆ. ಹಲವರು “ಇಂತಹ ಕೂಲ್ ಬಾಸ್ ಸಿಗೋದು ಅದೃಷ್ಟ” ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು “ಮೀಟಿಂಗ್‌ಗೆ ಗಂಭೀರತೆ ಇರಬೇಕು” ಎಂದು ಟೀಕಿಸಿದ್ದಾರೆ. ಕೋವಿಡ್ ನಂತರದ ಹೈಬ್ರಿಡ್ ವರ್ಕ್ ಕಲ್ಚರ್‌ನಲ್ಲಿ ಪ್ರೊಫೆಷನಲಿಸಂ ಅರ್ಥವೇ ಬದಲಾಗುತ್ತಿದೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !