November 9, 2026
Monday, November 9, 2026
spot_img

ನೂರು ರೂಪಾಯಿ ಪಟಾಕಿಯನ್ನು ನೂರರಷ್ಟು ನಂಬೋದು ಯಾಕೆ? ಕ್ಷಣದಲ್ಲಿ ಏನಾದ್ರು ಆಗಬಹುದು ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೂರು ರೂಪಾಯಿ ಕೊಟ್ಟು ಪಟಾಕಿಯೊಂದನ್ನು ತಂದಿರುತ್ತೀರಿ. ಅದರ ಲೇಬಲ್‌ ಮೇಲಿರುವ ಕೆಲಸವನ್ನು ಅದು ಮಾಡೇ ಮಾಡುತ್ತದೆ ಎಂದು ನಂಬೋದು ಹೇಗೆ? ಹೂವಿನ ಕುಂಡ ಹೂವಿನ ಕುಂಡದಂತೆ ಕಾಣಿಸಿ ಬೆಳಕಿನ ಖುಷಿ ನೀಡುತ್ತದೆ. ಆದರೆ ಅದೇ ಹೂವಿನ ಕುಂಡ ಹಾರೋಕೆ ಶುರು ಮಾಡಿ ನಿಮ್ಮ ಬಳಿಯೇ ಬಂದು ಬಿಟ್ರೆ? ಭೂಚಕ್ರ ಭೂಮಿಯಲ್ಲಿ ಸುತ್ತುತ್ತದೆ ಎಂದು ನೋಡುತ್ತಾ ಕೂತಾಗ ಚಕ್ರ ಹಾರಿ ಬಿಟ್ರೆ?

ಹೀಗೆಲ್ಲಾ ಆಗೋದಿಲ್ಲ ಎಂದು ಅಂದುಕೊಳ್ಳಬೇಡಿ. ಪಟಾಕಿಗೆ ಯಾವ ಗ್ಯಾರಂಟಿಯೂ ಇಲ್ಲ. ನಂಬಿಕೆ ಬಾರದಿದ್ರೆ ಈ ವಿಡಿಯೋ ನೋಡಿ..

ಭೂಚಕ್ರವೊಂದು ಭೂಮಿಯಲ್ಲಿ ಸುತ್ತುವುದನ್ನು ಬಿಟ್ಟು ಗಾಳಿಯಲ್ಲಿ ತೇಳಿ ಮನೆಯೊಳಕ್ಕೆ ಬಂದಿದೆ. ಅಲ್ಲಿದ್ದ ಉಳಿದ ಪಟಾಕಿಗಳಿಗೂ ಬೆಂಕಿ ತಗುಲಿ ಎಲ್ಲ ಪಟಾಕಿಗಳು ಒಂದೇ ಸಮಯಕ್ಕೆ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ಅಲ್ಲಿ ವಯಸ್ಸಾದವರೋ ಮಕ್ಕಳೋ ಇದ್ದಿದ್ದರೆ ಅವರ ಕಥೆ ಏನಾಗುತ್ತಿತ್ತು? ನೀವೇ ಆಲೋಚಿಸಿ. ಉತ್ತಮ ಕ್ವಾಲಿಟಿಯ ಪದಾರ್ಥಗಳಿರುವ ಉತ್ತಮ ಕ್ವಾಲಿಟಿಯ ಪಟಾಕಿಗಳನ್ನು ಮಾತ್ರ ಮನೆಗೆ ತನ್ನಿ. ಇಂತಹ ಉಲ್ಟಾ ಸೀದ ಕೆಲಸ ಮಾಡುವ ಪಟಾಕಿಗಳನ್ನು ತಂದೆ ಅವಘಡಕ್ಕೆ ಕಾರಣವಾಗುವಂತೆ ಮಾಡಬೇಡಿ.

ರಾಜ್ಯಾದ್ಯಂತ ನಡೆಯುತ್ತಿರುವ ಪಟಾಕಿ ಸಂಬಂಧಿತ ಅವಘಡಗಳಿಂದ ಜನ ಗಾಯಗೊಳ್ಳುತ್ತಿದ್ದಾರೆ. ಹಲವರು ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಜಾಗ್ರತೆಯಿಂದ ಸುರಕ್ಷಿತವಾದ ದೀಪಾವಳಿಯ ಆಚರಣೆ ಮಾಡಿ. ಎಲ್ಲರೂ ಸೇಫ್‌ ಆಗಿರಿ!

Must Read