March 17, 2026
Tuesday, March 17, 2026
spot_img

Tech | ಪದೇ ಪದೇ ಲ್ಯಾಪ್ ಟಾಪ್ ಬಿಸಿಯಾಗ್ತಿದ್ಯಾ? ಅದನ್ನ ಹೀಗೆ ಸರಿ ಮಾಡ್ಕೊಳಿ

ಲ್ಯಾಪ್‌ಟಾಪ್ ಸ್ವಲ್ಪ ಕೆಲಸ ಮಾಡಿದ್ರೂ ಬಿಸಿ ಆಗ್ತಿದೆಯಾ? ಗೇಮ್ ಆಡ್ತಾ ಇರೋದ್ರಲ್ಲಿ ಹ್ಯಾಂಗ್ ಆಗ್ತಿದೆಯಾ? ಇದನ್ನ ಸಣ್ಣ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಿದ್ರೆ ಮುಂದೆ ದೊಡ್ಡ ಡ್ಯಾಮೇಜ್ ಆಗೋ ಸಾಧ್ಯತೆ ಇದೆ. ಆದ್ರೆ ಟೆನ್ಷನ್ ಬೇಡ… ಕೆಲವು ಸ್ಮಾರ್ಟ್ ಟ್ರಿಕ್ಸ್ ಬಳಸಿ ಸುಲಭವಾಗಿ ಈ ಸಮಸ್ಯೆ ಕಡಿಮೆ ಮಾಡ್ಕೊಳ್ಳಬಹುದು!

Air flowಗೆ ಅವಕಾಶ ಕೊಡಿ
ಲ್ಯಾಪ್‌ಟಾಪ್ ಅನ್ನು ಬೆಡ್, ಕುರ್ಚಿ ಮೇಲೆ ಇಡೋದು ತಪ್ಪಿಸಿ. ಹಾರ್ಡ್ ಸರ್ಫೇಸ್ ಮೇಲೆ ಇಟ್ಟ್ರೆ ಗಾಳಿ ಸರಿಯಾಗಿ ಹರಿದು ಹೀಟ್ ಕಡಿಮೆ ಆಗತ್ತೆ.

Cooling pad ಬಳಸಿ
ಕೂಲಿಂಗ್ ಪ್ಯಾಡ್ ಬಳಸಿದ್ರೆ ಫ್ಯಾನ್ ಸಪೋರ್ಟ್ ಸಿಗುತ್ತೆ. ಗೇಮಿಂಗ್ ಅಥವಾ ಹೆವಿ ಯೂಸ್ ಮಾಡೋರಿಗೆ ಇದು ಸೂಪರ್ ಆಯ್ಕೆ.

Background apps ಕ್ಲೀನ್ ಮಾಡಿ
ಅಗತ್ಯವಿಲ್ಲದ ಅಪ್ಲಿಕೇಶನ್‌ಗಳು ರನ್ ಆಗ್ತಾ ಇದ್ದರೆ CPU ಮೇಲೆ ಲೋಡ್ ಹೆಚ್ಚಾಗುತ್ತೆ. Task Manager ನಲ್ಲಿ ಹೋಗಿ ಅವನ್ನ ಕ್ಲೋಸ್ ಮಾಡಿ.

ಇದನ್ನೂ ಓದಿ:

Dust ಕ್ಲೀನ್ ಮಾಡೋದು ಮರೆಯಬೇಡಿ
ಫ್ಯಾನ್ ಒಳಗೆ ಧೂಳು ಸೇರುತ್ತಾ ಹೋದ್ರೆ ಹೀಟ್ ಹೆಚ್ಚಾಗುತ್ತೆ. ಕೆಲ ತಿಂಗಳಿಗೆ ಒಮ್ಮೆ ಕ್ಲೀನ್ ಮಾಡೋದ್ರಿಂದ ಪರ್ಫಾರ್ಮೆನ್ಸ್ ಕೂಡ ಇಂಪ್ರೂವ್ ಆಗತ್ತೆ.

Charger & Battery ಗಮನಿಸಿ
ನಕಲಿ ಚಾರ್ಜರ್ ಅಥವಾ ಹಳೆಯ ಬ್ಯಾಟರಿ ಕೂಡ ಹೀಟ್ ಸಮಸ್ಯೆ ಕೊಡಬಹುದು. ಒರಿಜಿನಲ್ ಆಕ್ಸೆಸರೀಸ್ ಬಳಸಿ.

ಈ ಸಣ್ಣ ಸಲಹೆಗಳು ನಿಮ್ಮ ಲ್ಯಾಪ್‌ಟಾಪ್‌ನ್ನು ಕೂಲ್ ಆಗಿ, ಫಾಸ್ಟ್ ಆಗಿ ಇಡಲು ಸಹಾಯ ಮಾಡುತ್ತವೆ. ಈಗಲೇ ಟ್ರೈ ಮಾಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !