June 21, 2026
Sunday, June 21, 2026
spot_img

ಭಾರತೀಯ ಚಿತ್ರರಂಗದ ಅತಿದೊಡ್ಡ ‘ಮ್ಯೂಸಿಕಲ್ ಬ್ರೇಕಪ್’? ಮಣಿರತ್ನಂ ಹೊಸ ಚಿತ್ರಕ್ಕೆ ರೆಹಮಾನ್ ಸಂಗೀತವಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

1992ರಲ್ಲಿ ತೆರೆಕಂಡ ‘ರೋಜಾ’ ಚಿತ್ರದಿಂದ ಆರಂಭವಾದ ಮಣಿರತ್ನಂ ಮತ್ತು ಎ.ಆರ್. ರೆಹಮಾನ್ ಜೋಡಿ, ಮೊನ್ನೆ ಬಂದ ‘ಥಗ್ ಲೈಫ್’ ವರೆಗೂ ಸತತವಾಗಿ ಒಟ್ಟಿಗೆ ಕೆಲಸ ಮಾಡಿದೆ. ಮಣಿರತ್ನಂ ಅವರ ದೃಷ್ಟಿಕೋನಕ್ಕೆ ರೆಹಮಾನ್ ಅವರ ಸಂಗೀತವೇ ಜೀವವಾಗಿರುತ್ತಿತ್ತು. ಆದರೆ ಈಗ ಮಣಿರತ್ನಂ ಅವರು ತಮ್ಮ ಹೊಸ ಚಿತ್ರಕ್ಕೆ ರೆಹಮಾನ್ ಬದಲಾಗಿ ಬೇರೊಬ್ಬ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕೇವಲ 21 ವರ್ಷದ ಯುವ ಪ್ರತಿಭೆ ಸಾಯಿ ಅಭಯಂಕರ್ ಅವರನ್ನು ಮಣಿರತ್ನಂ ತಮ್ಮ ಮುಂದಿನ ಚಿತ್ರಕ್ಕೆ ಸಂಗೀತ ನೀಡಲು ಆರಿಸಿಕೊಂಡಿದ್ದಾರೆ. ಇಷ್ಟು ದೀರ್ಘಕಾಲದ ವೃತ್ತಿಜೀವನದಲ್ಲಿ ಮಣಿರತ್ನಂ ಕೆಲಸ ಮಾಡಿದ್ದು ಕೇವಲ ಇಬ್ಬರು ದಿಗ್ಗಜರ ಜೊತೆ ಮಾತ್ರ. ಮೊದಲ 10 ಸಿನಿಮಾಗಳಿಗೆ ಇಳಯರಾಜ ಸಂಗೀತ ನೀಡಿದರೆ, ನಂತರದ 3 ದಶಕಗಳನ್ನು ರೆಹಮಾನ್ ಆವರಿಸಿಕೊಂಡಿದ್ದರು. ಈಗ ಸಾಯಿ ಅಭಯಂಕರ್ ಸೇರ್ಪಡೆಯಾಗಿರುವುದು ದೊಡ್ಡ ಕುತೂಹಲ ಮೂಡಿಸಿದೆ.

ಮಣಿರತ್ನಂ ನಿರ್ದೇಶನದ ಈ ಹೊಸ ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕನಾಗಿ ನಟಿಸುತ್ತಿದ್ದಾರೆ. ಇದು ‘ಚೆಕ್ಕ ಚಿವಂತ ವಾನಂ’ ನಂತರ ಮಣಿರತ್ನಂ ಜೊತೆ ಅವರ ಎರಡನೇ ಚಿತ್ರ. ಇನ್ನು ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ಮಣಿರತ್ನಂ ಅವರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !