ಹೂಕೋಸು ಅಂದ್ರೆ ಎಲ್ಲರಿಗೂ ಮೊದಲಿಗೆ ನೆನಪಾಗೋದು ಗೋಬಿಮಂಚೂರಿ. ಆದರೆ ಅದೇ ಹೂಕೋಸಿನಿಂದ ಮನೆಯಲ್ಲೇ ಸರಳವಾಗಿ, ರುಚಿಯಾಗಿ ಪಲ್ಯ ಮಾಡ್ಕೊಂಡ್ರೆ ಅನ್ನಕ್ಕೆ ಸೂಪರ್ ಸೈಡ್ ಡಿಶ್ ಆಗುತ್ತೆ.
ಬೇಕಾಗುವ ಪದಾರ್ಥಗಳು
ಹೂಕೋಸು – 1
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿಣ – ಸ್ವಲ್ಪ
ಮೆಣಸಿನ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ, ಜೀರಿಗೆ – ಒಗ್ಗರಣೆಗೆ
ಕರಿಬೇವು – ಸ್ವಲ್ಪ
ಎಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಹೂಕೋಸು ತುಂಡುಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ 5 ನಿಮಿಷ ನೆನೆಸಿಡಿ.
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ.
ನಂತರ ಈರುಳ್ಳಿ, ಹಸಿಮೆಣಸು ಹಾಕಿ ಸ್ವಲ್ಪ ಬಾಡಿಸಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಈಗ ಹೂಕೋಸು ಸೇರಿಸಿ, ಅರಿಶಿಣ, ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಮುಚ್ಚಿ ನಿಧಾನ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.
ಹೂಕೋಸು ಪಲ್ಯ ಸಿದ್ಧ! ಬಿಸಿ ಅನ್ನ ಅಥವಾ ರೊಟ್ಟಿ ಜೊತೆಗೆ ಸಖತ್ ರುಚಿ ಕೊಡುತ್ತೆ



