March 19, 2026
Thursday, March 19, 2026
spot_img

FOOD | ಯುಗಾದಿ ಹಬ್ಬಕ್ಕೆ ಹೋಳಿಗೆ ಊಟದ ಜೊತೆಗೆ ಸ್ಪೆಷಲ್ ಮಾವಿನಕಾಯಿ ಚಟ್ನಿ ಮಾಡಿ

ಯುಗಾದಿ ಹಬ್ಬ ಅಂದರೆ ಹೋಳಿಗೆ ಊಟದ ಸಿಹಿ ರುಚಿ ಮಾತ್ರ ಅಲ್ಲ, ಜೊತೆಗೆ ಖಾರ-ಹುಳಿ ರುಚಿಯ ವಿಶೇಷ ಸೈಡ್ ಡಿಶ್‌ಗಳು ಕೂಡ ಮುಖ್ಯ. ಹೋಳಿಗೆಯ ಸಿಹಿಗೆ ಸರಿಯಾದ ಖಾರ ಹುಳಿಯ ಕಾಂಬಿನೇಶನ್ ಆಗೋದು ಮಾವಿನಕಾಯಿ ಚಟ್ನಿ. ಈ ಚಟ್ನಿ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಹಸಿ ಮಾವಿನಕಾಯಿ – 1
ಹಸಿ ಮೆಣಸಿನಕಾಯಿ – 3-4
ತೆಂಗಿನ ತುರಿ – 1/2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – ಸ್ವಲ್ಪ
ಸಾಸಿವೆ – 1/2 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – 1 ಟೀ ಸ್ಪೂನ್

ಮಾಡುವ ವಿಧಾನ:

ಮೊದಲು ಮಿಕ್ಸಿಯಲ್ಲಿ ಕತ್ತರಿಸಿದ ಮಾವಿನಕಾಯಿ, ಹಸಿ ಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಮತ್ತು ಬೆಲ್ಲ ಹಾಕಿ ರುಬ್ಬಿಕೊಳ್ಳಿ.

ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಚಟ್ನಿಗೆ ಒಗ್ಗರಣೆ ಕೊಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !