August 30, 2026
Sunday, August 30, 2026
spot_img

ಪವಿತ್ರ ಗಂಗಾನದಿಯಲ್ಲಿ ‘ಇಫ್ತಾರ್ ಕೂಟ’: ಚಿಕನ್ ಬಿರಿಯಾನಿ ಸವಿದಿದ್ದ 14 ಮಂದಿಗೆ 14 ದಿನ ಜೈಲೂಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವಿತ್ರ ಗಂಗಾ ನದಿಯಲ್ಲಿ ವಿಹರಿಸುತ್ತಾ ದೋಣಿಯಲ್ಲಿ ಇಫ್ತಾರ್ ಕೂಟ ಹೆಸರಿನಲ್ಲಿ ಚಿಕನ್ ಬಿರಿಯಾನಿ ತಿಂದಿದ್ದ 14 ಮಂದಿಗೆ ವಾರಣಾಸಿ ಕೋರ್ಟ್ ಇಂದು 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ನೀಡಿದೆ.

ಮಂಗಳವಾರ ಈ ಘಟನೆ ನಡೆದಿತ್ತು. ಗಂಗಾ ನದಿಯಲ್ಲಿ ದೋಣಿಯಲ್ಲಿ ತೆರಳಿದ 14 ಮಂದಿ ಯುವಕರು ಅಲ್ಲಿ ಮಾಂಸಾಹಾರ ಸೇವಿಸಿದ್ದು, ಇದು ಧಾರ್ಮಿಕ ಆಚರಣೆಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 14 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.


ಇಂದು ವಾದ ಪ್ರತಿವಾದ ಆಲಿಸಿದ ವಾರಾಣಸಿ ಹೆಚ್ಚುವರಿ ಸಿವಿಲ್ ಕೋರ್ಟ್, ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ, ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !