June 28, 2026
Sunday, June 28, 2026
spot_img

Soup | ರಾತ್ರಿ ಊಟಕ್ಕೆ ಬೆಸ್ಟ್ ರಾಜ್ಮಾ ಸೂಪ್: ಹೊಟ್ಟೆ ತುಂಬುತ್ತೆ, ಆರೋಗ್ಯವೂ ಹೆಚ್ಚುತ್ತೆ

ದಿನವಿಡೀ ಕೆಲಸದ ಬಳಿಕ ರಾತ್ರಿ ಹೊಟ್ಟೆಗೆ ಹಗುರವಾಗಿಯೂ, ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರ ಬೇಕೆಂದರೆ ರಾಜ್ಮಾ ಸೂಪ್ ಉತ್ತಮ ಆಯ್ಕೆ. ಪ್ರೋಟೀನ್, ಫೈಬರ್ ಹಾಗೂ ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಸೂಪ್ ಜೀರ್ಣಕ್ರಿಯೆಗೆ ಸಹಕಾರಿ. ತೂಕ ನಿಯಂತ್ರಣ ಬಯಸುವವರಿಗೂ ಇದು ಸೂಕ್ತವಾದ ಡಿನ್ನರ್.

ಬೇಕಾಗುವ ಸಾಮಗ್ರಿಗಳು

ರಾಜ್ಮಾ (ಕಿಡ್ನಿ ಬೀನ್ಸ್) – ½ ಕಪ್
ಈರುಳ್ಳಿ – ½ ಕಪ್
ಬೆಳ್ಳುಳ್ಳಿ – 3 ರಿಂದ 4 ಎಸಳು
ಟೊಮೆಟೊ – 1½ ಕಪ್
ಎಣ್ಣೆ ಅಥವಾ ಬೆಣ್ಣೆ – 1½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ ಅಥವಾ ಖಾರದ ಪುಡಿ – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಟೀಸ್ಪೂನ್
ಕ್ಯಾಪ್ಸಿಕಂ – 1 ಟೇಬಲ್ ಸ್ಪೂನ್ (ಸಣ್ಣಗೆ ಹೆಚ್ಚಿದ)
ಹಸಿರು ಈರುಳ್ಳಿ – 1 ಟೇಬಲ್ ಸ್ಪೂನ್ (ಅಲಂಕಾರಕ್ಕೆ)
ನೀರು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ನೆನೆಸಿದ ರಾಜ್ಮಾವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಸಾಕಷ್ಟು ನೀರು ಹಾಕಿ 4–5 ವಿಶಿಲ್ ಬರುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.

ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿ.

ಬೇಯಿಸಿದ ರಾಜ್ಮಾವನ್ನು ಈ ಮಿಶ್ರಣಕ್ಕೆ ಸೇರಿಸಿ. ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ 2 ಕಪ್ ನೀರು ಹಾಕಿ 5 ನಿಮಿಷ ಕುದಿಸಿ.

ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮತ್ತೆ ಪಾತ್ರೆಗೆ ಹಾಕಿ ಬೇಕಾದಷ್ಟು ನೀರು ಸೇರಿಸಿ 5 ನಿಮಿಷ ಕುದಿಸಿ.

ಗ್ಯಾಸ್ ಆರಿಸಿ ನಿಂಬೆ ರಸ ಸೇರಿಸಿ. ಮೇಲಿಂದ ಕ್ಯಾಪ್ಸಿಕಂ ಮತ್ತು ಹಸಿರು ಈರುಳ್ಳಿ ಹಾಕಿ ಅಲಂಕರಿಸಿ ಬಿಸಿಬಿಸಿಯಾಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !