March 21, 2026
Saturday, March 21, 2026
spot_img

BCCI ಮೇಲೆ ವರ್ಣ ತಾರತಮ್ಯ ಆರೋಪ: ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಬಿಸಿಸಿಐ ವಿರುದ್ಧ ವಿವಾದವೊಂದು ಸ್ಫೋಟವಾಗಿದೆ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಕಾಮೆಂಟರಿ ವೃತ್ತಿಗೆ ನಿವೃತ್ತಿ ಘೋಷಿಸಿದ್ದು, ಜೊತೆಗೆ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.

23 ವರ್ಷಗಳ ಕಾಮೆಂಟರಿ ಅನುಭವ ಇದ್ದರೂ, ತಮ್ಮನ್ನು ಎಂದಿಗೂ ಪ್ರಮುಖ ಕಾರ್ಯಕ್ರಮಗಳಿಗೆ ಬಳಸಲಾಗಿಲ್ಲ ಎಂದು ಶಿವರಾಮಕೃಷ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಹಾಗೂ ನಂತರ ಬಂದ ಕಾಮೆಂಟೇಟರ್‌ಗಳಿಗೆ ಟಾಸ್ ಮತ್ತು ಪಿಚ್ ವರದಿ ಮಾಡುವ ಅವಕಾಶ ಸಿಕ್ಕಿದ್ದರೂ, ತಮಗೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಇದಕ್ಕೂ ಮೀರಿ, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೊಬ್ಬರು ‘ಬಹುಶಃ ನಿಮ್ಮ ಮೈಬಣ್ಣದ ಕಾರಣದಿಂದಾಗಿ ನಿಮ್ಮನ್ನು ಕಡೆಗಣಿಸಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಶಿವರಾಮಕೃಷ್ಣನ್ ‘ಖಂಡಿತ’ ಎಂದು ಉತ್ತರಿಸಿರುವ ಈ ವಿವಾದಕ್ಕೆ ಹೊಸ ತಿರುವು ನೀಡಿದೆ. ಇದರಿಂದ ಬಿಸಿಸಿಐ ವಿರುದ್ಧ ತಾರತಮ್ಯದ ಗಂಭೀರ ಆರೋಪ ಕೇಳಿಬಂದಂತಾಗಿದೆ.

ಈ ನಡುವೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಪ್ರತಿಕ್ರಿಯಿಸಿ, ಐಪಿಎಲ್ ಕಾಮೆಂಟರಿಯಿಂದಲೂ ದೂರ ಉಳಿಯುವಂತೆ ವ್ಯಂಗ್ಯ ಮಾಡಿದ್ದಾರೆ. ಇವರಿಬ್ಬರ ನಡುವೆ ಹಳೆಯ ವೈಮನಸ್ಸು ಮತ್ತೆ ಮೆಲುಕು ಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !