October 7, 2026
Wednesday, October 7, 2026
spot_img

ಟೈಫಾಯ್ಡ್‌ಗೆ ತುತ್ತಾದ ಸಿಜೆಪಿ ನಾಯಕ; ‘ಪ್ರತಿಭಟನೆ ನಿಲ್ಲಲ್ಲ’ ಎಂದು ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಿಜೆಪಿ (CJP) ಸಂಘಟನೆಯ ಪ್ರಮುಖ ನಾಯಕ ಅಭಿಜೀತ್ ದೀಪ್ಕೆಗೆ ವೈದ್ಯಕೀಯ ತಪಾಸಣೆಯಲ್ಲಿ ಟೈಫಾಯ್ಡ್ ಇರುವುದು ದೃಢಪಟ್ಟಿದೆ. ಸದ್ಯ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಆಸ್ಪತ್ರೆಯ ಹಾಸಿಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

‘ಪ್ರತಿಭಟನೆ ಮುಂದುವರಿಯಲಿದೆ’

ತಮ್ಮ ಅನಾರೋಗ್ಯದ ನಡುವೆಯೂ ಧೃತಿಗೆಡದ ಅಭಿಜೀತ್ ದೀಪ್ಕೆ, “ನನ್ನ ಆರೋಗ್ಯ ಹದಗೆಟ್ಟಿರಬಹುದು, ಆದರೆ ನಮ್ಮ ಹೋರಾಟದ ಹಾದಿ ತಪ್ಪುವುದಿಲ್ಲ. ನಮ್ಮ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಿರಂತರವಾಗಿ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಅನುಪಸ್ಥಿತಿಯಲ್ಲಿ ಪ್ರತಿಭಟನೆಯನ್ನು ಮುನ್ನಡೆಸಲು ಇತರೆ ವಿದ್ಯಾರ್ಥಿ ನಾಯಕರಿಗೆ ಜವಾಬ್ದಾರಿ ವಹಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ನಾಳೆ ಸರ್ಕಾರದ ಅಂತಿಮ ತೀರ್ಮಾನ

ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ತಡೆಗೆ ಸಂಬಂಧಿಸಿದಂತೆ ಸಿಜೆಪಿ ಮಂಡಿಸಿರುವ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ನಾಳೆ (ಜುಲೈ 26) ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಈಗಾಗಲೇ ತಿಳಿಸಿದ್ದಾರೆ. ಇತ್ತ ಪ್ರತಿಭಟನಾಕಾರರ ನಾಯಕ ಆಸ್ಪತ್ರೆಗೆ ದಾಖಲಾಗಿರುವುದರಿಂದ ಜಂತರ್ ಮಂತರ್‌ನಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Must Read