March 21, 2026
Saturday, March 21, 2026
spot_img

RCB ಫ್ಯಾನ್ಸ್ ರೆಡಿನಾ?: ಇನ್ನೆರಡು ದಿನದಲ್ಲಿ ಟಿಕೆಟ್ ನಿಮ್ಮ ಕೈಯಲ್ಲಿರುತ್ತೆ

ಐಪಿಎಲ್ 2026 ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರಿನ ಪಂದ್ಯಗಳ ಟಿಕೆಟ್ ಮಾರಾಟ ಶೀಘ್ರದಲ್ಲೇ ಆರಂಭವಾಗಲಿದೆ. ಪಂದ್ಯಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಜೋರಾಗಿದೆ.

ಟಿಕೆಟ್ ಮಾರಾಟವನ್ನು ಅಧಿಕೃತ ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಮಾತ್ರ ಆರಂಭಿಸಲಾಗುತ್ತದೆ ಎಂದು ತಂಡ ತಿಳಿಸಿದೆ. ಮೊದಲು ಸದಸ್ಯರಿಗೆ ಅವಕಾಶ ನೀಡಲಾಗಿದ್ದು, ನಂತರ ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಟಿಕೆಟ್ ದರ ಹಾಗೂ ಪ್ರವೇಶ-ನಿರ್ಗಮನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

ಮಾರ್ಚ್ 28ರಂದು ಮೊದಲ ಪಂದ್ಯದಲ್ಲಿ ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಏಪ್ರಿಲ್ 5ರಂದು ಚೆನ್ನೈ ವಿರುದ್ಧ ಮತ್ತೊಂದು ಪ್ರಮುಖ ಪಂದ್ಯ ನಡೆಯಲಿದೆ. ಈ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

ಅಧಿಕೃತ ಮೂಲಗಳನ್ನು ಬಿಟ್ಟು ಬೇರೆಡೆ ಟಿಕೆಟ್ ಖರೀದಿಸಬಾರದು ಎಂದು ತಂಡ ಎಚ್ಚರಿಕೆ ನೀಡಿದೆ. ಟಿಕೆಟ್ ಹೊಂದಿದವರಿಗೆ ಮೆಟ್ರೋ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಯೋಜನೆಯೂ ರೂಪಿಸಲಾಗುತ್ತಿದೆ.

ಸುರಕ್ಷತೆ ಮತ್ತು ವ್ಯವಸ್ಥೆ ದೃಷ್ಟಿಯಿಂದ ಪಾರ್ಕಿಂಗ್ ಹಾಗೂ ಪ್ರವೇಶ ಮಾರ್ಗಗಳನ್ನೂ ವ್ಯವಸ್ಥಿತವಾಗಿ ರೂಪಿಸಲಾಗಿದ್ದು, ಯಾವುದೇ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !