March 22, 2026
Sunday, March 22, 2026
spot_img

ಪಲ್ಯ, ಗ್ರೇವಿ & More 42 | ನುಗ್ಗೆಕಾಯಿಂದ ಸಾಂಬಾರ್ ಮಾತ್ರ ಮಾಡೋದಲ್ಲ ಒಮ್ಮೆ ಈ ರೀತಿ ಫ್ರೈ ಮಾಡಿ ನೋಡಿ

ನುಗ್ಗೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆದು. ಇದರಲ್ಲಿ ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿವೆ. ಮಾಮೂಲಾಗಿ ಸಾಂಬಾರ್ ಮಾಡೋದಕ್ಕಿಂತ ಸ್ವಲ್ಪ ಮಸಾಲೆ ಸೇರಿಸಿ ಮಾಡಿದ ನುಗ್ಗೆಕಾಯಿ ಫ್ರೈ ತಿನ್ನೋದಕ್ಕೆ ತುಂಬಾ ರುಚಿಯಾಗಿರುತ್ತೆ.

ಬೇಕಾಗುವ ಪದಾರ್ಥಗಳು:

ನುಗ್ಗೆಕಾಯಿ – 2
ಈರುಳ್ಳಿ – 1
ಟೊಮ್ಯಾಟೊ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿನ – 1/4 ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1/2 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ನುಗ್ಗೆಕಾಯಿಯನ್ನು ತೊಳೆದು, ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ಟೊಮ್ಯಾಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಹಾಕಿ ಚೆನ್ನಾಗಿ ಕಲಸಿ. ಈಗ ಬೇಯಿಸಿದ ನುಗ್ಗೆಕಾಯಿ ಸೇರಿಸಿ, ಉಪ್ಪು ಹಾಕಿ, ನಿಧಾನವಾಗಿ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !