November 3, 2026
Tuesday, November 3, 2026
spot_img

ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣದ ರಣಕಹಳೆ: ಬಿಡುಗಡೆಗೂ ಮುನ್ನವೇ 100 ಕೋಟಿ ರೂ. ಗಡಿ ದಾಟಿದ ಬುಕ್ಕಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ರಾಮಾಯಣ: ಪಾರ್ಟ್ ಒನ್ ಚಿತ್ರ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ನವೆಂಬರ್ 5ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಈ ಚಿತ್ರ, ಆರಂಭಿಕ ವಾರಾಂತ್ಯದ ಜಾಗತಿಕ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ 100 ಕೋಟಿ ಗಡಿ ದಾಟಿದೆ ಎಂದು ವರದಿಯಾಗಿದೆ.

ದೇಶೀಯ ಬುಕ್ಕಿಂಗ್‌ನಲ್ಲೂ ಭರ್ಜರಿ ಓಟ

ವರದಿಗಳ ಪ್ರಕಾರ, ಭಾರತದಲ್ಲಿ ಆರಂಭಿಕ ವಾರಾಂತ್ಯಕ್ಕೆ ಬ್ಲಾಕ್ ಮಾಡಿದ ಸೀಟುಗಳೂ ಸೇರಿದಂತೆ 72 ಕೋಟಿಗೂ ಅಧಿಕ ಮುಂಗಡ ಬುಕ್ಕಿಂಗ್ ದಾಖಲಾಗಿದೆ. ವಿದೇಶಿ ಮಾರುಕಟ್ಟೆಗಳಿಂದ 40 ಕೋಟಿಗೂ ಹೆಚ್ಚು ಮೊತ್ತ ಸೇರ್ಪಡೆಯಾಗಿದ್ದು, ಒಟ್ಟು ಜಾಗತಿಕ ಮುಂಗಡ ಬುಕ್ಕಿಂಗ್ 100 ಕೋಟಿಯ ಗಡಿ ಮೀರಿದೆ. ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವುದರಿಂದ ಅಂತಿಮ ಮೊತ್ತ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಉತ್ತರ ಅಮೆರಿಕದಲ್ಲಿ ದಾಖಲೆಗಳ ಬೆನ್ನಟ್ಟಿದ ರಾಮಾಯಣ

ಅಮೆರಿಕದಲ್ಲಿ ನವೆಂಬರ್ 4ರಂದು ನಡೆಯಲಿರುವ ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳಿಗೆ 50,000ಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ಹಲವು ಜನಪ್ರಿಯ ಚಿತ್ರಗಳ ಪ್ರಿವ್ಯೂ ಟಿಕೆಟ್ ಮಾರಾಟದ ಅಂದಾಜು ಮಾನದಂಡಗಳನ್ನು ದಾಟಿದೆ ಎಂದು ವರದಿಯಾಗಿದೆ.

Must Read