ತೂಕ ಇಳಿಸೋದು ಸುಲಭ ಕೆಲಸ ಅಲ್ಲ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡೋದು ಇನ್ನೂ ಮುಖ್ಯ. ಕೆಲವರು ಬೇಗನೆ ತೂಕ ಕಡಿಮೆ ಮಾಡಬೇಕು ಅನ್ನೋ ಆಸೆಯಿಂದ ಕ್ರ್ಯಾಶ್ ಡೈಟ್, ಹೆಚ್ಚು ವ್ಯಾಯಾಮ ಮಾಡ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ಹಾನಿ ಆಗೋ ಸಾಧ್ಯತೆ ಹೆಚ್ಚು. ಹಾಗಿದ್ರೆ, ನಿಜವಾಗಿಯೂ ಹೆಲ್ದಿ ವೇಟ್ ಲಾಸ್ ಅಂದ್ರೇನು?
ತಜ್ಞರ ಪ್ರಕಾರ, ತಿಂಗಳಿಗೆ ಸುಮಾರು 2 ರಿಂದ 4 ಕೆಜಿ ತೂಕ ಇಳಿಸಿದ್ರೆ ಅದು ಹೆಲ್ದಿ ವೇಟ್ ಲಾಸ್ ಅಂತ ಪರಿಗಣಿಸಲಾಗುತ್ತೆ. ಇದಕ್ಕಿಂತ ಹೆಚ್ಚು ತೂಕ ಕಡಿಮೆ ಆದ್ರೆ ಅದು ಫ್ಯಾಟ್ ಅಲ್ಲ, ದೇಹದ ಮಸಲ್ ಮತ್ತು ನೀರು ಕಡಿಮೆಯಾಗಿರೋ ಸಾಧ್ಯತೆ ಇದೆ.
ಸ್ಲೋ ವೇಟ್ ಲಾಸ್ ಯಾಕೆ ಬೆಸ್ಟ್?
ಹಂತ ಹಂತವಾಗಿ ತೂಕ ಇಳಿಸಿದ್ರೆ ದೇಹ ಅದಕ್ಕೆ ಅಡ್ಜಸ್ಟ್ ಆಗುತ್ತದೆ. ಇದು ದೀರ್ಘಕಾಲ ತೂಕ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಫಾಸ್ಟ್ ವೇಟ್ ಲಾಸ್ ಮಾಡಿದ್ರೆ ಮತ್ತೆ ಬೇಗನೆ ತೂಕ ಹೆಚ್ಚಾಗೋ ಸಾಧ್ಯತೆ ಇರುತ್ತದೆ.
ಹೆಲ್ದಿ ಆಹಾರ ತಿನ್ನೋದು ಮುಖ್ಯ. ಹೆಚ್ಚು ಪ್ರೋಟೀನ್, ಕಡಿಮೆ ಜಂಕ್ ಫುಡ್, ಸರಿಯಾದ ಪ್ರಮಾಣದ ಊಟ. ಇವು ತೂಕ ಇಳಿಸಲು ಸಹಾಯ ಮಾಡುತ್ತವೆ. ಉಪವಾಸ ಅಥವಾ ಊಟ ಬಿಡೋದು ತಪ್ಪು ವಿಧಾನ.
ಇದನ್ನೂ ಓದಿ:
ಪ್ರತಿದಿನ ಕನಿಷ್ಠ 30-45 ನಿಮಿಷ ವ್ಯಾಯಾಮ ಮಾಡೋದು ಉತ್ತಮ. ವಾಕಿಂಗ್, ಯೋಗ, ಸ್ಟ್ರೆಂಥ್ ಟ್ರೈನಿಂಗ್ ಇವು ದೇಹದ ಫ್ಯಾಟ್ ಕಡಿಮೆ ಮಾಡುತ್ತವೆ.
ತೂಕ ಇಳಿಸೋದು ಒಂದು ದಿನದ ಕೆಲಸ ಅಲ್ಲ. ನಿಯಮಿತ ಜೀವನಶೈಲಿ, ಸರಿಯಾದ ನಿದ್ರೆ ಮತ್ತು ಸ್ಟ್ರೆಸ್ ಕಡಿಮೆ ಇಟ್ಟರೆ ಮಾತ್ರ ದೀರ್ಘಕಾಲ ಉತ್ತಮ ಫಲಿತಾಂಶ ಸಿಗುತ್ತದೆ.
ಬೇಗನೆ ತೂಕ ಇಳಿಸುವುದಕ್ಕಿಂತ ನಿಧಾನವಾಗಿ, ಆರೋಗ್ಯಕರವಾಗಿ ಇಳಿಸುವುದು ಉತ್ತಮ. ತಿಂಗಳಿಗೆ 2-4 ಕೆಜಿ ತೂಕ ಇಳಿಸಿದ್ರೆ ಅದೇ ನಿಜವಾದ ಹೆಲ್ದಿ ವೇಟ್ ಲಾಸ್



