ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಬಾಕಿ ಇದ್ದು, ಈಗಾಗಲೇ ಮೈದಾನದಲ್ಲಿ ಎಲ್ಲ ತಂಡಗಳ ತಾಲೀಮು ಶುರುವಾಗಿದೆ. ಇದರ ಮದ್ಯೆ ಟೀಮ್ ಇಂಡಿಯಾ ಮುಂದಿನ ಸರಣಿಗೆ ಸಜ್ಜಾಗಬೇಕಿದ್ದು, ಇಂದು ಬಿಸಿಸಿಐ ಮುಂದಿನ ಸರಣಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎರಡು ತಿಂಗಳ ಐಪಿಎಲ್ ಬಳಿಕ ಟೀಂ ಇಂಡಿಯಾ ಐರ್ಲೆಂಡ್ ದೇಶದತ್ತ ಪಯಣ ಮಾಡಲಿದ್ದು, ಎರಡು ಟಿ20 ಸರಣಿ ನಡೆಯಲಿದೆ. ಐರ್ಲೆಂಡ್ ನ ಬೆಲ್‌ಫಾಸ್ಟ್ ನಲ್ಲಿ ಮ್ಯಾಚ್ ಗಳು ನಡೆಯಲಿದ್ದು, ಮೊದಲ ಪಂದ್ಯ ಜೂನ್ 26 ರಂದು ನಡೆದರೆ, ಎರಡನೇ ಪಂದ್ಯ ಜೂನ್ 28 ರಂದು ಆಡಲಿದೆ.
ಅದಕ್ಕೂ ಮುನ್ನ ಟೀಮ್ ಇಂಡಿಯಾ ಐಪಿಎಲ್ ಮುಗಿದ ಬೆನ್ನಿಗೆ ಅಫ್ಘಾನಿಸ್ತಾನ ವಿರುದ್ಧ ಜೂನ್ 6 ರಿಂದ ಜೂನ್ 20 ರವರೆಗೆ ಒಂದು ಟೆಸ್ಟ್ ಪಂದ್ಯ ಮತ್ತು ಮೂರು ಏಕದಿನ ಸರಣಿ ಆಡಲಿದೆ. ಅದಾದ ಬಳಿಕ ಐರ್ಲೆಂಡ್ ಪ್ರವಾಸ ಮಾಡಲಿದೆ.
ಐರ್ಲೆಂಡ್ ಸರಣಿ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದ್ದು, ಅಲ್ಲಿ ಐದು ಟಿ20 ಸರಣಿ ಮತ್ತು ಮೂರು ಏಕದಿನ ಪಂದ್ಯ ನಡೆಯಲಿದೆ .
ಇತ್ತ ಟಿ20 ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಜೊತೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆವಿದ್ದು, ಏಕದಿನ ಸರಣಿಗೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಆಗುವ ಸಾಧ್ಯತೆಯಿದೆ ಎಂದು ಕ್ರೀಡಾ ತಜ್ಜರು ಅಭಿಪ್ರಾಯಪಟ್ಟಿದ್ದಾರೆ.



