September 19, 2026
Saturday, September 19, 2026
spot_img

ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ಗೆ ರಶ್ಮಿಕಾಗಿಂತ ವಿದ್ಯಾ ಬಾಲನ್‌ ಬೆಟರ್‌ ಚಾಯ್ಸ್‌? ಪ್ರೊಡ್ಯೂಸರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ಗೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಸುಬ್ಬುಲಕ್ಷ್ಮಿಯಾಗಿ ಜನರ ಮುಂದೆ ಕಾಣಿಸಿಕೊಂಡಿದ್ದು, ಸಿನಿಮಾಗೆ ಕಮಲ್‌ ಹಾಸನ್‌ ಕ್ಲಾಪ್‌ ಮಾಡಿದ್ದರು. ರಶ್ಮಿಕಾ ಸುಬ್ಬುಲಕ್ಷ್ಮೀ ಅವರ ಪಾತ್ರಕ್ಕೆ ಒಕೆ, ಆದರೆ ವಿದ್ಯಾ ಬಾಲನ್‌ ಅವರು ಇನ್ನಷ್ಟು ಸೂಟ್‌ ಆಗ್ತಾ ಇದ್ರು ಅಂತ ನೆಟ್ಟಿಗರು ಹೇಳೋಕೆ ಆರಂಭಿಸಿದ್ದಾರೆ. ಈ ಹಿಂದೆ ನಟಿ ವಿದ್ಯಾ ಬಾಲನ್‌ ಸುಬ್ಬುಲಕ್ಷ್ಮೀ ಅವರ ರೀತಿ ತಯಾರಾಗಿ ಫೋಟೊಶೂಟ್‌ ಮಾಡಿಸಿದ್ದರು. ಆ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಶ್ಮಿಕಾಗಿಂತ ವಿದ್ಯಾ ಬಾಲನ್‌ ಚೆನ್ನಾಗಿ ಕಾಣ್ತಾ ಇದ್ರು ಎಂದು ಹೇಳ್ತಿದ್ದಾರೆ.

ಇದಕ್ಕೆ ನಿರ್ಮಾಪಕ ಅಲ್ಲು ಅರವಿಂದ್‌ ಉತ್ತರ ನೀಡಿದ್ದು, ಈ ಸಿನಿಮಾ ಮಾಡಿ ಅಂತ ಹೇಳಿದ್ದು, ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿ ಎಂದು ಹೇಳಿದ್ದು ನಾನಲ್ಲ. ಇದು ಸುಬ್ಬುಲಕ್ಷ್ಮೀ ಅಮ್ಮ ಹೇಳಿದ ಚಾಯ್ಸ್‌. ರಶ್ಮಿಕಾ ಮಂದಣ್ಣ ಅವರಿಗೆ ಸುಬ್ಬುಲಕ್ಷ್ಮೀ ಅವರ ರೀತಿಯ ಸೀರೆ ನೀಡಿ ಒಮ್ಮೆ ಹಾಕಿಕೊಂಡು ಬರಲು ಹೇಳಿದ್ದೆವು. ಆಗ ರಶ್ಮಿಕಾ ಥೇಟ್‌ ಅಮ್ಮನ ರೀತಿಯೇ ಕಾಣಿಸಿದರು. ಆಕೆ ಕಣ್ಣಲ್ಲಿ ಹೊಳಪಿದೆ, ಕರುಣೆ ಇದೆ. ರಶ್ಮಿಕಾ ಇದಕ್ಕೆ ಬೆಸ್ಟ್‌ ಚಾಯ್ಸ್‌ ಆಗಿದ್ದಾರೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಯಾವುದೇ ಬಯೋಪಿಕ್‌ ಮಾಡಿದಾಗಲೂ ಇವರ ಬದಲು ಇವರು ಇರಬೇಕಿತ್ತು ಎಂದು ಜನ ಹೇಳೋದು ಕಾಮನ್‌. ಅದು ಅವರವರ ದೃಷ್ಠಿ. ನಮ್ಮ ಕಡೆಯಿಂದ ರಶ್ಮಿಕಾ ಇದಕ್ಕೆ ಪರ್ಫೆಕ್ಟ್‌ ಚಾಯ್ಸ್‌ ಆಗಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ರಶ್ಮಿಕಾ ಕೂಡ ಈ ಪಾತ್ರ ಒಲಿದು ಬಂದ ತಕ್ಷಣವೇ ಒಪ್ಪಿಕೊಂಡಿದ್ದಾರೆ. ಈ ರೀತಿ ಪಾತ್ರ ಬಂದಿದ್ದು ನನ್ನ ಸೌಭಾಗ್ಯ. ನಾನು ಪುಣ್ಯ ಮಾಡಿರೋದು ಸತ್ಯ. ಅಮ್ಮನ ಪಾತ್ರ ಮಾಡೋದಕ್ಕಾಗಿ ಕಠಿಣ ಶ್ರಮ ಹಾಕುತ್ತೇನೆ. ನನ್ನನ್ನು ಪಾತ್ರಕ್ಕೆ ಆರಿಸಿದವರಿಗೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಸಿನಿಮಾ ರಶ್ಮಿಕಾ ಕೈ ಸೇರಿರುವುದು ಅವರ ಅಭಿಮಾನಿಗಳಿಗೆ ಥ್ರಿಲ್ಲಿಂಗ್‌ ಎನಿಸಿದೆ. ಕಾಕ್‌ಟೇಲ್‌ನಂತಹ ಸಿನಿಮಾ ಮಾಡಿ, ಮೈಸಾ ಸಿನಿಮಾದ ಶೂಟಿಂಗ್‌ ಮುಗಿಸಿರುವ ರಶ್ಮಿಕಾ ಸಿಕ್ಕಾಪಟ್ಟೆ ವೆರೈಟಿ ಆದ ಪಾತ್ರಗಳನ್ನು ಆರಿಸಿ ವರ್ಸಟೈಲ್‌ ಆಕ್ಟರ್‌ ಎನಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !