ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರುಕಟ್ಟೆಯಲ್ಲಿ ಕುಸಿದ ತೆಂಗಿನಕಾಯಿ ಬೆಲೆ ಈಗ ರೈತರ ಆತಂಕವನ್ನು ಹೆಚ್ಚಿಸಿವೆ. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಫ್ತು ವ್ಯವಹಾರ ಸ್ಥಗಿತಗೊಂಡಿದ್ದು, ಇದರ ನೇರ ಹೊಡೆತ ಕೃಷಿ ಕ್ಷೇತ್ರಕ್ಕೆ ಬಿದ್ದಿದೆ.
ಅಂತಾರಾಷ್ಟ್ರೀಯ ಸಾಗಾಟ ಮಾರ್ಗಗಳಲ್ಲಿ ವ್ಯತ್ಯಯ ಉಂಟಾದ ಪರಿಣಾಮ, ಕೊಲ್ಲಿ ರಾಷ್ಟ್ರಗಳಿಗೆ ನಡೆಯುತ್ತಿದ್ದ ತೆಂಗಿನಕಾಯಿ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಇದರಿಂದ ವಿದೇಶಗಳಿಗೆ ಹೋಗಬೇಕಿದ್ದ ಸರಕು ದೇಶೀಯ ಮಾರುಕಟ್ಟೆಗಳಿಗೆ ಹರಿದುಬಂದಿದ್ದು, ಪೂರೈಕೆ ಹೆಚ್ಚಳದಿಂದ ಬೆಲೆ ಕುಸಿತ ಉಂಟಾಗಿದೆ.
ಇದನ್ನೂ ಓದಿ:
ಒಂದು ತಿಂಗಳ ಹಿಂದೆ ಸಾವಿರ ತೆಂಗಿನಕಾಯಿಗೆ ಸುಮಾರು 22 ಸಾವಿರ ರೂಪಾಯಿ ಇದ್ದ ಬೆಲೆ, ಈಗ 12 ರಿಂದ 13 ಸಾವಿರ ರೂಪಾಯಿಗೆ ಇಳಿದಿದೆ. ಅಂದರೆ ಕೇವಲ ಕೆಲವೇ ವಾರಗಳಲ್ಲಿ ಸುಮಾರು 10 ಸಾವಿರ ರೂಪಾಯಿ ಕುಸಿತ ಕಂಡಿದೆ. ಈ ಅಚಾನಕ್ ಬದಲಾವಣೆ ರೈತರ ಆದಾಯಕ್ಕೆ ಭಾರೀ ಹೊಡೆತ ನೀಡಿದೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ತೆಂಗಿನಕಾಯಿ ರಫ್ತಾಗುತ್ತಿದ್ದ ಹಿನ್ನೆಲೆಯಲ್ಲಿ, ಈ ಕುಸಿತದ ಪರಿಣಾಮ ಹೆಚ್ಚು ಗೋಚರಿಸಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ.



