March 23, 2026
Monday, March 23, 2026
spot_img

Fitness | ಜಿಮ್ ನಲ್ಲಿ ಜಬರ್ದಸ್ತ್ ವರ್ಕ್ ಔಟ್ ಮಾಡೋರಿಗೆ ಆಹಾರದಷ್ಟೇ ನಿದ್ದೆನೂ ಮುಖ್ಯ ಯಾಕೆ ಗೊತ್ತಾ?

ಜಿಮ್‌ನಲ್ಲಿ ಗಂಟೆಗಳ ಕಾಲ ಬೆವರು ಚೆಲ್ಲೋದು ಮಾತ್ರ ಫಿಟ್ನೆಸ್‌ಗೆ ಸಾಕಾಗುವುದಿಲ್ಲ. ದೇಹವನ್ನು ಬಲಿಷ್ಠವಾಗಿಸಲು, ಮಸಲ್ ಗ್ರೋತ್ ಸರಿಯಾಗಿ ಆಗೋಕೆ ಮತ್ತು ತೂಕ ಇಳಿಸೋಕೆ ಉತ್ತಮ ನಿದ್ದೆಯೂ ಅಷ್ಟೇ ಮುಖ್ಯ. ಹಲವರು ಆಹಾರ ಮತ್ತು ವ್ಯಾಯಾಮದ ಮೇಲೆ ಹೆಚ್ಚು ಗಮನ ಕೊಟ್ಟು, ನಿದ್ದೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ನಿಜವಾಗಿ ಫಿಟ್ನೆಸ್ ಪ್ರಯಾಣದಲ್ಲಿ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ.

  • ಮಸಲ್ ರಿಕವರಿ ಮತ್ತು ಗ್ರೋತ್: ವರ್ಕ್‌ಔಟ್ ಮಾಡಿದಾಗ ಮಸಲ್‌ಗಳು ಸಣ್ಣ ಮಟ್ಟದಲ್ಲಿ ಹಾನಿಯಾಗುತ್ತವೆ. ಸರಿಯಾದ ನಿದ್ದೆ ವೇಳೆ ದೇಹವು ಅವನ್ನು ಮರುನಿರ್ಮಿಸಿ, ಹೆಚ್ಚು ಬಲಿಷ್ಠವಾಗಿಸುತ್ತದೆ. ನಿದ್ದೆ ಕಡಿಮೆ ಇದ್ದರೆ ಮಸಲ್ ಬೆಳವಣಿಗೆ ನಿಧಾನವಾಗುತ್ತದೆ.
  • ನಿದ್ದೆ ಸರಿಯಾಗಿದ್ದರೆ ಗ್ರೋತ್ ಹಾರ್ಮೋನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಫ್ಯಾಟ್ ಬರ್ನ್ ಮತ್ತು ಮಸಲ್ ಬಿಲ್ಡಿಂಗ್‌ಗೆ ಸಹಾಯ ಮಾಡುತ್ತದೆ. ನಿದ್ದೆ ಕೊರತೆಯಿಂದ ಕಾರ್ಟಿಸೋಲ್ ಹೆಚ್ಚಾಗಿ ತೂಕ ಇಳಿಕೆ ಕಷ್ಟವಾಗಬಹುದು.
  • ಸರಿಯಾಗಿ ನಿದ್ರೆ ಮಾಡಿದರೆ ಮುಂದಿನ ದಿನ ಜಿಮ್‌ನಲ್ಲಿ ಹೆಚ್ಚು ಎನರ್ಜಿ ಇರುತ್ತದೆ. ಇಲ್ಲದಿದ್ದರೆ ದೇಹ ದಣಿವಿನಿಂದ ಬಳಲುತ್ತಿದ್ದು, ವರ್ಕ್‌ಔಟ್ ಪರಿಣಾಮಕಾರಿಯಾಗುವುದಿಲ್ಲ.
  • ಉತ್ತಮ ನಿದ್ದೆ ದೇಹದ ಮೆಟಾಬಾಲಿಸಂ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ಇದು ತೂಕ ಇಳಿಕೆಗೆ ಮುಖ್ಯ ಅಂಶ.
  • ನಿದ್ದೆ ಕೊರತೆಯಿಂದ ಒತ್ತಡ, ಅಸಹನೆ ಹೆಚ್ಚುತ್ತದೆ. ಸರಿಯಾದ ನಿದ್ದೆ ಮನಸ್ಸನ್ನು ಶಾಂತಗೊಳಿಸಿ, ವರ್ಕ್‌ಔಟ್‌ನಲ್ಲಿ ಫೋಕಸ್ ಹೆಚ್ಚಿಸುತ್ತದೆ.

ಜಿಮ್‌ನಲ್ಲಿ ಎಷ್ಟು ಬೆವರು ಸುರಿಸಿದ್ರು, ಸರಿಯಾದ ನಿದ್ದೆ ಇಲ್ಲದಿದ್ದರೆ ಫಲಿತಾಂಶ ಸಂಪೂರ್ಣ ಸಿಗುವುದಿಲ್ಲ. ಆದ್ದರಿಂದ ದಿನಕ್ಕೆ ಕನಿಷ್ಠ 7–8 ಗಂಟೆಗಳ ಗುಣಮಟ್ಟದ ನಿದ್ದೆ ಫಿಟ್ನೆಸ್ ಗುರಿಗಳಿಗೆ ಅತ್ಯಗತ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !