July 14, 2026
Tuesday, July 14, 2026
spot_img

ಬಂಗಾರ ಪ್ರಿಯರಿಗೆ ಶಾಕ್: ಗಗನಕ್ಕೇರಿದ ಚಿನ್ನದ ದರ, ಬೆಳ್ಳಿಯ ಬೆಲೆಯಲ್ಲಿ ಅಲ್ಪ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬರುತ್ತಿದೆ. ಹೂಡಿಕೆದಾರರು ಮತ್ತು ಗ್ರಾಹಕರನ್ನು ಅಚ್ಚರಿಗೊಳಿಸುವಂತೆ, ಚಿನ್ನದ ಬೆಲೆ ಒಂದೇ ದಿನದಲ್ಲಿ ಪ್ರತಿ ಗ್ರಾಮ್‌ಗೆ ಸುಮಾರು 1,000 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಅಪರಂಜಿ ಚಿನ್ನದ ಬೆಲೆ 14,000 ರೂಪಾಯಿಗಿಂತ ಕೆಳಕ್ಕೆ ಬಂದಿದ್ದು, ಇದೇ ಟ್ರೆಂಡ್ ಮುಂದುವರಿದರೆ ಬೆಲೆ ನಾಲ್ಕಂಕಿಗೆ ಇಳಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಇಂದಿನ ಮಾರುಕಟ್ಟೆ ದರಗಳ ವಿವರ:

22 ಕ್ಯಾರಟ್ ಚಿನ್ನ: 10 ಗ್ರಾಮ್‌ಗೆ 1,24,350 ರೂ.

24 ಕ್ಯಾರಟ್ ಚಿನ್ನ (ಅಪರಂಜಿ): 10 ಗ್ರಾಮ್‌ಗೆ 1,35,650 ರೂ.

ಬೆಳ್ಳಿ ಬೆಲೆ: ಪ್ರತಿ 100 ಗ್ರಾಮ್‌ಗೆ 23,000 ರೂ. (ಇಂದು 15 ರೂ. ಇಳಿಕೆ ಕಂಡಿದೆ).

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಮ್‌ಗೆ 1,24,350 ರೂಪಾಯಿ ಹಾಗೂ ಬೆಳ್ಳಿ 23,000 ರೂಪಾಯಿ ಇದೆ. ಇನ್ನು ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ಬೆಲೆ 23,500 ರೂಪಾಯಿಗಳಷ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !