March 24, 2026
Tuesday, March 24, 2026
spot_img

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಬಿರುಗಾಳಿ ಸಹಿತ ಮಳೆ, ಧರೆಗೆ ಉರುಳಿದ ವಿದ್ಯುತ್‌ ಕಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಲೇ ಇದ್ದು, ಹಾವೇರಿಯಲ್ಲಿ ವರ್ಷಧಾರೆ ಹಾನಿ ಸೃಷ್ಟಿಸಿದೆ.

ರಾಣೇಬೆನ್ನೂರಿನಲ್ಲಿ ಹಲವೆಡೆ ಕಂಬಗಳು ನೆಲಕ್ಕುರುಳಿವೆ, ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೌರಿಶಂಕರ ನಗರದಲ್ಲಿ ಈ ಅವಘಡ ಸಂಭವಿಸಿದ್ದು, ಮರಗಳು ಕೂಡ ನೆಲಕ್ಕೆ ಉರುಳಿವೆ.

ರಾತ್ರಿ ಈ ಅನಾಹುತ ಸಂಭವಿಸಿದ ಕಾರಣ ಜನರ ಪ್ರಾಣ ಉಳಿದಿದೆ. ತಪ್ಪಿವೆ. ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಿ ಜನರಿಗೆ ಸಮಸ್ಯೆ ಉಂಟಾಯಿತು. ಅಲ್ಲದೆ ರಸ್ತೆಗಳ ಮೇಲೆ ಕಂಬಗಳು ಬಿದ್ದಿರುವುದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಗಡಾರ ಆಸ್ಪತ್ರೆಯ ಬಳಿ ಮರದ ಕೆಳಗೆ ಆಟೋ ನಿಲ್ಲಿಸಿದ್ದು, ಆಟೋ ಮೇಲೆ ಬೃಹತ್‌ ಗಾತ್ರದ ಮರ ಬಿದ್ದಿದೆ. ಮಳೆ ಬಂದಿದೆಯೆಂದು ಆಟೋ ನಿಲ್ಲಿಸಿ ದೂರದಲ್ಲಿ ನಿಂತಿದ್ದ ವೇಳೆ ಹೀಗಾಗಿದೆ. ಜೀವನಕ್ಕೆ ಅಂತ ಇದ್ದ ಆಟೋವನ್ನು ಕಳೆದುಕೊಂಡು ಮಾಲೀಕ ಜಬೀಯುಲ್ಲಾ ಕಂಗಾಲಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !