March 24, 2026
Tuesday, March 24, 2026
spot_img

Viral | ಕಳ್ಳರಿಂದ ತಪ್ಪಿಸಿಕೊಂಡು ಮನೆಯತ್ತ ಹೊರಟ ಶ್ವಾನಗಳ ಗುಂಪು, ನಾಯಿ ಪ್ರೀತಿ – ನಿಯತ್ತು ಅನ್ನೋದು ಇದಕ್ಕೇನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಅಪಹರಣಕ್ಕೊಳಗಾದ ಏಳು ಸಾಕು ನಾಯಿಗಳು ಅಚ್ಚರಿಯ ರೀತಿಯಲ್ಲಿ ತಮ್ಮ ಮನೆಗೆ ಮರಳಿದ ಘಟನೆ ನಡೆದಿದೆ. ಮಾಲೀಕನ ಮನೆಯಿಂದ ಕಳ್ಳರು ಈ ನಾಯಿಗಳನ್ನು ಕದ್ದೊಯ್ದು ಟ್ರಕ್‌ನಲ್ಲಿ ಸಾಗಿಸುತ್ತಿದ್ದರು. ಮಾಂಸಕ್ಕಾಗಿ ನಾಯಿಗಳನ್ನು ಅಪಹರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಮಧ್ಯ ದಾರಿಯಲ್ಲಿ ಟ್ರಕ್ ನಿಲ್ಲಿಸಿದ ವೇಳೆ, ನಾಯಿಗಳು ಚಾಣಾಕ್ಷತನದಿಂದ ತಪ್ಪಿಸಿಕೊಂಡಿವೆ. ಬಳಿಕ ಅವುಗಳು ಒಂದರ ಹಿಂದೆ ಒಂದಾಗಿ ಸಾಗುತ್ತಾ ಸುಮಾರು 17 ಕಿಲೋಮೀಟರ್ ದೂರವನ್ನು ನಡೆದು ಬಂದಿವೆ. ಈ ಸಂದರ್ಭದಲ್ಲಿ ಕಾರ್ಗಿ ತಳಿಯ ಸಣ್ಣ ನಾಯಿ ಇತರ ನಾಯಿಗಳಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸಿದ್ದು ವಿಶೇಷ.

ಇದನ್ನೂ ಓದಿ:

ಮಾಲೀಕ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೆ, ಪ್ರಾಣಿ ರಕ್ಷಣಾ ಸಂಘಟನೆಗಳ ಸಹಾಯದಿಂದ ಹುಡುಕಾಟ ಆರಂಭಿಸಲಾಗಿತ್ತು. ಡ್ರೋನ್ ಮೂಲಕ ನಡೆಸಿದ ಶೋಧದಲ್ಲಿ ಹೆದ್ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ನಾಯಿಗಳು ಪತ್ತೆಯಾಗಿವೆ. ಬಳಿಕ ಸಂಘಟನೆಯ ಸದಸ್ಯರು ಅವು ಸುರಕ್ಷಿತವಾಗಿ ಮನೆ ತಲುಪುವಂತೆ ನೆರವಾದರು.

ಗೋಲ್ಡನ್ ರಿಟ್ರೈವರ್ ಮತ್ತು ಜರ್ಮನ್ ಶೆಫರ್ಡ್ ಸೇರಿದಂತೆ ಉತ್ತಮ ತಳಿಯ ಈ ನಾಯಿಗಳು ಮಾಲೀಕನೊಂದಿಗೆ ಅತ್ಯಂತ ಆತ್ಮೀಯವಾಗಿದ್ದವು. ಮರಳಿ ಮನೆ ತಲುಪಿದ ನಂತರ, ಮಾಲೀಕ ಭಾವುಕರಾಗಿ ನಾಯಿಗಳನ್ನು ಬರಮಾಡಿಕೊಂಡಿದ್ದಾರೆ.

ಈ ಘಟನೆ ಶ್ವಾನಗಳ ಬುದ್ಧಿವಂತಿಕೆ ಮತ್ತು ಮಾಲೀಕರೊಂದಿಗೆ ಇರುವ ನಿಷ್ಠೆಯೊಂದನ್ನು ಮತ್ತೊಮ್ಮೆ ತೋರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !