ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಸದ್ಯಕ್ಕೆ ‘ಧುರಂಧರ್ 2’ ಬಿರುಗಾಳಿ ಎಬ್ಬಿಸಿದೆ. ರಜನಿಕಾಂತ್, ರಿಷಬ್ ಶೆಟ್ಟಿ ಅವರಂತಹ ಸ್ಟಾರ್‌ಗಳ ಬೆಂಬಲದ ಬೆನ್ನಲ್ಲೇ, ಈಗ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಈ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡಿರೋ ಶಿವಣ್ಣ, ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡಕ್ಕೆ ಶಹಬ್ಬಾಸ್ ಎಂದಿದ್ದಾರೆ.
ರಣವೀರ್ ಅವರ ನಟನೆಗೆ ಶಿವಣ್ಣ ಮರುಳಾಗಿದ್ದಾರೆ. ಅಷ್ಟು ಕಷ್ಟದ ಪಾತ್ರವನ್ನು ಸಲೀಸಾಗಿ ನಿಭಾಯಿಸಿದ್ದಾರೆ ಎಂದು ಕೊಂಡಾಡಿದ್ದಾರೆ.
ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಮತ್ತು ಸೈನಿಕರ ದೇಶಭಕ್ತಿಯನ್ನು ಕಟ್ಟಿಕೊಟ್ಟ ರೀತಿಗೆ ಶಿವಣ್ಣ ಸಲಾಂ ಎಂದಿದ್ದಾರೆ. ಹಳೆಯ ಹಾಡುಗಳನ್ನು ಬಳಸಿ ಶಾಶ್ವತ್ ಸಚ್‌ದೇವ್ ನೀಡಿರುವ ಸಂಗೀತ ಪರಿಣಾಮಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ತಮ್ಮ ’45’ ಸಿನಿಮಾದ ಸುದ್ದಿಗೋಷ್ಠಿಯಲ್ಲೂ ರಣವೀರ್ ಬಗ್ಗೆ ಶಿವಣ್ಣ ಮಾತನಾಡಿದ್ದರು. ಈಗ ಸಿನಿಮಾ ನೋಡಿ ಎಕ್ಸ್ ಮೂಲಕ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯಕ್ಕೆ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಹಳೆ ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ.



