ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯ ಬಳಿಕ ಟ್ರಿಪ್ ಗೆ ತೆರಳಿದ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವೆರಕೊಂಡ ಜೋಡಿ ಇದೀಗ ಹೊಸ ಟ್ರೆಂಡ್ಗೆ ನಾಂದಿ ಹಾಡಿದೆ. ಸಾಮಾನ್ಯವಾಗಿ ದಂಪತಿಗಳು ಮದುವೆಯ ನಂತರ ಹನಿಮೂನ್ಗೆ ತೆರಳುವುದು ರೂಢಿ. ಆದರೆ ಈ ಜೋಡಿ ಸ್ನೇಹಿತರ ಜೊತೆ ಸೇರಿ ಪ್ರವಾಸಕ್ಕೆ ತೆರಳಿ ‘ಬಡ್ಡೀಮೂನ್’ ಸಂಸ್ಕೃತಿಯನ್ನು ಪರಿಚಯಿಸಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಈ ‘ಬಡ್ಡೀಮೂನ್’ ಪದ್ಧತಿಯಲ್ಲಿ, ದಂಪತಿಗಳು ತಮ್ಮ ಸ್ನೇಹಿತರೊಂದಿಗೆ ಮೋಜು ಮಾಡಲು ಪ್ರವಾಸ ಕೈಗೊಳ್ಳುತ್ತಾರೆ. ಭಾರತದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪರಿಚಯವಾಗದ ಈ ಟ್ರೆಂಡ್ಗೆ ರಶ್ಮಿಕಾ–ವಿಜಯ್ ಚಾಲನೆ ನೀಡಿರುವುದು ವಿಶೇಷ.
ಇದನ್ನೂ ಓದಿ:
ಈ ಜೋಡಿ ಈಗಾಗಲೇ ಅನೇಕ ಬಾರಿ ಒಟ್ಟಿಗೆ ಟ್ರಿಪ್ಗಳಿಗೆ ತೆರಳಿದ್ದು, ಮದುವೆಗೆ ಮುನ್ನ ತಮ್ಮ ಸಂಬಂಧವನ್ನು ಬಹಿರಂಗಪಡಿಸದೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಮದುವೆಯ ಬಳಿಕ ಅವರು ಥಾಯ್ಲೆಂಡ್ನಲ್ಲಿ ಸ್ವಚ್ಛಂದವಾಗಿ ಕಾಲ ಕಳೆಯುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಖಾಸಗಿತನ ಕಾಪಾಡಿಕೊಳ್ಳಲು ದಂಪತಿಗಳು ಮಾತ್ರವೇ ಪ್ರವಾಸಕ್ಕೆ ಹೋಗುವ ಪದ್ಧತಿ ಇರುವಾಗ, ಸ್ನೇಹಿತರ ಜೊತೆ ತೆರಳುವ ಮೂಲಕ ಈ ಜೋಡಿ ಹೊಸ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಿದೆ. ಬ್ಯಾಚುಲರೇಟ್ ಪಾರ್ಟಿ ಟ್ರೆಂಡ್ ನಂತರ, ‘ಬಡ್ಡೀಮೂನ್’ ಕೂಡ ಭಾರತದಲ್ಲಿ ಜನಪ್ರಿಯವಾಗುವ ಸೂಚನೆಗಳು ಕಂಡುಬರುತ್ತಿವೆ.



