ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಕೇಳಿದ್ರೆನೆ ಹಾರ್ಟ್ ಬೀಟ್ ಜಾಸ್ತಿ ಆಗುತ್ತೆ. ಅದರ ಮಧ್ಯೆ ಈ ಗ್ಯಾಸ್ ಬುಕ್ಕಿಂಗ್ ಕಿರಿಕಿರಿ, ಡೆಲಿವರಿ ಲೇಟು.. ಅಬ್ಬಬ್ಬಾ! ಸಾಕು ಸಾಕಪ್ಪಾ ಅನ್ಸೋ ಹಾಗೆ ಮಾಡಿದೆ. ಇವತ್ತಿನ ಈ ಬಿಕ್ಕಟ್ಟು ನೋಡ್ತಿದ್ರೆ, ನಮ್ ಅಜ್ಜಿ ಕಾಲದ ಆ ಮಣ್ಣಿನ ಒಲೆ ಅಥವಾ ಕಟ್ಟಿಗೆ ಒಲೆಯೇ ಎಷ್ಟೋ ವಾಸಿ ಅನಿಸ್ತಿದೆ.
ಈಗಿನ ಇಕ್ಕಟ್ಟಾದ ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಸೌದೆ ಒಲೆ ಹಚ್ಚೋದು ಸುಲಭವಲ್ಲ ಅನ್ನೋದು ಗೊತ್ತು. ಆದ್ರೆ, ಈ ಗ್ಯಾಸ್ ರಗಳೆ ನೋಡಿದಾಗ ಮಾತ್ರ “ಛೆ! ಮನೆಯಲ್ಲೊಂದು ಒಲೆ ಇದ್ದಿದ್ರೆ, ಈ ಗ್ಯಾಸ್ ತಲೆನೋವು ಇಲ್ದೇ ಆರಾಮಾಗಿ ಇರಬಹುದಿತ್ತು” ಅನ್ನೋ ಮಾತು ಪ್ರತಿಯೊಬ್ಬರ ಬಾಯಲ್ಲೂ ಬರ್ತಿದೆ.
ಒಟ್ಟಿನಲ್ಲಿ, ಹಳೆ ಕಾಲದ ಆ ‘ಒಲೆ’ ಈಗಿನ ಹೈಟೆಕ್ ‘ಗ್ಯಾಸ್ ಸ್ಟೌ’ಗಿಂತ ನೂರು ಪಟ್ಟು ಮೇಲು ಅಂತ ಜನ ಈಗ ಪಶ್ಚಾತ್ತಾಪ ಪಡ್ತಿದ್ದಾರೆ ಅನ್ಸುತ್ತೆ!



