September 17, 2026
Thursday, September 17, 2026
spot_img

ಸರ್ಕಾರದ ಅರೆಬರೆ ಪೂರೈಕೆ, ಖಾಸಗಿ ಏಜೆನ್ಸಿಗಳ ಸುಲಿಗೆ: ಕಂಗಾಲಾದ ಹೊಟೇಲ್ ಮಾಲೀಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಅಭಾವ ತಲೆದೋರಿದ್ದು, ಹೊಟೇಲ್ ಮಾಲೀಕರು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಸರ್ಕಾರದ ಕಡೆಯಿಂದ ಸಮರ್ಪಕ ಪೂರೈಕೆಯಿಲ್ಲದ ಕಾರಣ, ಅನಿವಾರ್ಯವಾಗಿ ಖಾಸಗಿ ಏಜೆನ್ಸಿಗಳ ಮೊರೆ ಹೋಗುತ್ತಿರುವ ಮಾಲೀಕರು ಅಲ್ಲಿನ ಲಗಾಮು ಇಲ್ಲದ ದರ ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಯುದ್ಧದ ಸನ್ನಿವೇಶಕ್ಕೂ ಮುನ್ನ 1,700 ರೂ. ಆಸುಪಾಸಿನಲ್ಲಿದ್ದ 17 ಕೆಜಿಯ ಖಾಸಗಿ ಸಿಲಿಂಡರ್ ಬೆಲೆ ಈಗ ಬರೊಬ್ಬರಿ 3,600 ರೂ. ಗೆ ತಲುಪಿದೆ.

ಸರ್ಕಾರದಿಂದ ಲಭ್ಯವಾಗಬೇಕಾದ ಕೋಟಾದಲ್ಲಿ ಕೇವಲ 33% ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಆದರೆ ವಾಸ್ತವದಲ್ಲಿ ಅದೂ ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂಬುದು ಮಾಲೀಕರ ದೂರು.

ಸರ್ಕಾರಿ ಸಿಲಿಂಡರ್ ಸಿಗದ ಲಾಭ ಪಡೆಯುತ್ತಿರುವ ಖಾಸಗಿ ಏಜೆನ್ಸಿಗಳು, ಡಿಮ್ಯಾಂಡ್‌ಗೆ ತಕ್ಕಂತೆ ಬೆಲೆ ಹೆಚ್ಚಿಸಿ ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ನೂಕುತ್ತಿವೆ.

ಪ್ರಸ್ತುತ ಈ ಬಿಕ್ಕಟ್ಟಿನಿಂದಾಗಿ ಹೊಟೇಲ್ ಗಳಲ್ಲಿ ಆಹಾರದ ದರ ಏರಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ. “ಮುಂದಿನ ವಾರವಾದರೂ ಪೂರೈಕೆಯಲ್ಲಿ ಸುಧಾರಣೆಯಾಗಬಹುದು” ಎಂಬ ಅಲ್ಪ ಆಸೆಯೊಂದಿಗೆ ಮಾಲೀಕರು ಸರ್ಕಾರದ ಕಡೆಗೆ ಮುಖ ಮಾಡಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಕಮರ್ಷಿಯಲ್ ಗ್ಯಾಸ್ ಪೂರೈಕೆಯನ್ನು ಸರಿಪಡಿಸದಿದ್ದರೆ ಹೋಟೆಲ್‌ಗಳನ್ನು ಮುಚ್ಚುವುದೊಂದೇ ದಾರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !