March 28, 2026
Saturday, March 28, 2026
spot_img

ಸುಳ್ಯದಲ್ಲಿ ಗಾಳಿ, ಸಿಡಿಲಬ್ಬರದ ಮಳೆ: ಧರೆಗೆ ಮುತ್ತಿನಂತೆ ಉರುಳಿದ ಆಲಿಕಲ್ಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪರಿಸರದಲ್ಲಿ ಶನಿವಾತ ಸಂಜೆ ಬಳಿಮ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ.


ಶನಿವಾರ ಸಂಜೆ ಸುಮಾರು 4:30ರ ವೇಳೆಗೆ ಸುಳ್ಯ ತಾಲೂಕಿನಾಧ್ಯಂತ ಗಾಳಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆ ಸುರಿದಿದ್ದು ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತುವಿನಲ್ಲಿ ಆಲಿಕಲ್ಲು ಮಳೆಯಾದರೆ ಇತ್ತ ತಾಲೂಕಿನ ನಾನಾ ಭಾಗಗಳಲ್ಲಿ ಉತ್ತಮವಾದ ಮಳೆಯಾಗಿದ್ದು ಕೃಷಿಕರು ಹಾಗೂ ಜನತೆ ವರುಣನ ಕೃಪೆಗೆ ಸಂತಸಗೊಂಡರು.

ಸೆಕೆಯಿಂದ ಬಳಲಿದ್ದ ಸುಳ್ಯಕ್ಕೆ ಸಂಜೆಯ ಮಳೆ ಸಂತಸ ನೀಡಿದೆ. ವಾತಾವರಣದಲ್ಲಿನ ಉಷ್ಣಾಂಶದಲ್ಲಿ ಸತತ ಏರಿಕೆಯಿಂದ‌ ಜನತೆ ಕಂಗಾಲಾಗಿದ್ದರು.

ಮಳೆಯ ಜೊತೆ ಭಾರೀ ಗಾಳಿ ಕಾಣಿಸಿಕೊಂಡಿದ್ದು, ಅಲ್ಲಲ್ಲಿ‌ ಮರ ಉರುಳುವ, ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಆತಂಕದಲ್ಲಿ ಜನರಿದ್ದಾರೆ. ಜೊತೆಗೆ ಗಾಳಿಯು ಬೀಸಿದ್ದು ವಿಧ್ಯುತ್ ವ್ಯತ್ಯಯವಾಗಲಿದೆಯೇ ಎಂಬ ಆತಂಕ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !