March 28, 2026
Saturday, March 28, 2026
spot_img

ಮೇಲುಕೋಟೆ ವೈರಮುಡಿ ಉತ್ಸವಕ್ಕೂ ವರುಣನ ಆಗಮನ: ಭಕ್ತರಲ್ಲಿ ಮನೆಮಾಡಿದ ಸಂಭ್ರಮ

ಹೊಸದಿಗಂತ ವರದಿ, ಮಂಡ್ಯ :

ಮೇಲುಕೋಟೆಯಲ್ಲಿ ನಡೆದ ಶ್ರೀದೇವಿ, ಭೂದೇವಿ ಸಮೇತ ಗರುಡಾರೂಢನಾದ ಶ್ರೀ ಚೆಲುವರಾಯಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಸ್ವತಃ ವರುಣದೇವನೆ ಬಂದಿದ್ದಾನೆ. ಮೇಲುಕೋಟೆಯಾದ್ಯಂತ ವರುಣ ಸಿಂಚನವಾಗಿದೆ.

ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವದಲ್ಲಿ ಕೆಲವೊಮ್ಮೆ ವರುಣ ಸಿಂಚನವಾಗುವುದು ಸಾಮಾನ್ಯ. ಅದರಂತೆ ಈ ಬಾರಿಯೂ ವರುಣ ಸಿಂಚನವಾಗಿದೆ. ನೆರೆದಿದ್ದ ಭಕ್ತಾದಿಗಳು ಮಳೆಯಿಂದಾಗು ಪುಳಕಗೊಂಡರು.

ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವದಲ್ಲಿ ಗಣ್ಯಾತಿ ಗಣ್ಯರೂ ಸಹ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಚ್.ಡಿ. ರೇವಣ್ಣ, ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ಅಪ್ಪಾಜಿಗೌಡ, ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಸೇರಿದಂತೆ ನೂರಾರು ಮಂದಿ ಗಣ್ಯಾತಿ ಗಣ್ಯರು, ಶ್ರೀಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !