March 29, 2026
Sunday, March 29, 2026
spot_img

IPL 2026 | ರಹಾನೆ, ರಘುವಂಶಿ ಭರ್ಜರಿ ಬ್ಯಾಟಿಂಗ್: ಮುಂಬೈ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಕೆಕೆಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಂಖೆಡೆಯಲ್ಲಿ ರಹಾನೆ ,ಅಂಗಕ್ರಿಶ್ ರಘುವಂಶಿ ಬಿರುಸಿನ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್‌ ಗಳಿಸಿದ್ದು, ಮುಂಬೈ ಇಂಡಿಯನ್ಸ್ ಗೆ ಬಿಗ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡಕ್ಕೆ ನಾಯಕ ರಹಾನೆ ಮತ್ತು ಫಿನ್ ಅಲೆನ್ ಉತ್ತಮ ಆರಂಭ ಒದಗಿಸಿದರು. ಆದರೆ ಫಿನ್ ಅಲೆನ್ 37 ರನ್ ಗಳಿಸಿ ಔಟಾದರು. ಇತ್ತ ರಹಾನೆ 40 ಎಸೆತಗಳಲ್ಲಿ 67 ರನ್ ಬಾರಿಸಿ ಮುಂಬೈ ಬೌಲರ್ ಗಳ ಬೆವರಿಳಿಸಿದರು.

ಬಳಿಕ ಬಂದ ಯುವ ಬ್ಯಾಟರ್ ಅಂಗಕ್ರಿಶ್ ರಘುವಂಶಿ ಭರ್ಜರಿ ಸಿಕ್ಸರ್‌ ಗಳ ಸುರಿಮಳೆಗೈದರು. ತಂಡಕ್ಕೆ 51 ರನ್‌ಗಳ ಕೊಡುಗೆ ನೀಡಿದರು. ಇವರಿಗೆ ರಿಂಕು ಸಿಂಗ್ 34 ರನ್ ಗಳ ಸಾಥ್ ನೀಡಿದರು. ಅಂತಿಮವಾಗಿ ಕೆಕೆಆರ್ ಉತ್ತಮ ರನ್ ಗಳಿಸಿ ಮುಂಬೈಗೆ ಬಿಗ್ ಟಾರ್ಗೆಟ್ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !