March 30, 2026
Monday, March 30, 2026
spot_img

ಪ್ಲಾಸ್ಟಿಕ್‌ ಬಾಟಲಿಗೆಲ್ಲ ಪೆಟ್ರೋಲ್‌ ಹಾಕೋದಿಲ್ಲ ಎಂದ ಬಂಕ್‌ ಸಿಬ್ಬಂದಿ, ರೊಚ್ಚಿಗೆದ್ದ ರೈತರು

ಚಿಕ್ಕಬಳ್ಳಾಪುರದಲ್ಲಿ ಪ್ಲಾಸ್ಟಿಕ್‌ ಬಾಟಲಿಗೆ ಪೆಟ್ರೋಲ್‌ ಹಾಕೋದಿಲ್ಲ ಎಂದು ಸಿಬ್ಬಂದಿ ಹೇಳಿದ್ದು, ರೈತರು ರೊಚ್ಚಿಗೆದ್ದಿದ್ದಾರೆ. ಇಡೀ ಬಂಕ್‌ನ್ನೇ ಬಂದ್‌ ಮಾಡಿಸಿದ್ದಾರೆ.

ಭಾರತ್‌ ಪೆಟ್ರೋಲ್‌ ಬಂಕ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್‌ ಹಾಕಿ ಎಂದು ರೈತರು ಹೇಳಿದ್ದಾರೆ. ಆದರೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ರೀತಿ ಬಾಟಲಿಗಳಿಗೆ ಪೆಟ್ರೋಲ್‌ ಹಾಕಬೇಡಿ ಎಂದು ಖಡಕ್‌ ಸೂಚನೆ ನೀಡಿದೆ. ಹೀಗಾಗಿ ಬಂಕ್‌ ಸಿಬ್ಬಂದಿ ಬಾಟಲಿಗೆ ಪೆಟ್ರೋಲ್‌ ಹಾಕಲು ನಿರಾಕರಿಸಿದ್ದಾರೆ.

ಇದನ್ನು ಒಪ್ಪದ ರೈತರು ಬೆಳೆಗಳಿಗೆ ಮದ್ದು ಹೊಡೆಯುವ ಮಿನಿ ಟ್ರ್ಯಾಕ್ಟರ್‌ಗಳಿಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ಬೇಕು. ಇಷ್ಟು ದಿನದಿಂದ ನಾವು ಹೀಗೇ ಪೆಟ್ರೋಲ್‌ ತಗೊಂಡು ಹೋಗಿರೋದು. ಇಷ್ಟು ಸಮಯ ಕೊಡ್ತಾ ಇದ್ದ ವ್ಯಕ್ತಿ ಈಗ ಕೊಡೋದಿಲ್ಲ ಅಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !