March 30, 2026
Monday, March 30, 2026
spot_img

CINE | ಸ್ನೇಹಿತ ರಕ್ಷಿತ್‌ ಶೆಟ್ಟಿಯನ್ನೂ ಅನ್‌ಫಾಲೋ ಮಾಡಿದ ರಿಷಭ್‌ ಶೆಟ್ಟಿ, ಲಿಸ್ಟ್‌ನಲ್ಲಿರೋದು ‌3 ಅಕೌಂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಸ ಸಿನಿಮಾ ಅನೌನ್ಸ್‌ ಮಾಡಿದ ಬೆನ್ನಲೇ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಹೊಂಬಾಳೆ ಫಿಲಂಸ್‌ನ್ನು ಅನ್‌ಫಾಲೋ ಮಾಡಿದ್ದರು. ಇದು ಸಾಕಷ್ಟು ಜನರಿಗೆ ಆಶ್ಚರ್ಯ ಉಂಟುಮಾಡಿತ್ತು. ಅದಾದ ನಂತರ ಇದೀಗ ತಮ್ಮ ಸ್ನೇಹಿತ ರಕ್ಷಿತ್‌ ಶೆಟ್ಟಿಯನ್ನು ಕೂಡ ಅನ್‌ಫಾಲೋ ಮಾಡಿದ್ದಾರೆ.

ಈ ಹಿಂದೆಯಷ್ಟೇ ರಾಜ್‌ ಬಿ. ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ರನ್ನು ರಿಷಭ್‌ ಅನ್‌ಫಾಲೋ ಮಾಡಿದ್ದರು. ಇದೀಗ ಈ ಸಾಲಿಗೆ ರಕ್ಷಿತ್ ಶೆಟ್ಟಿ‌ ಕೂಡ ಸೇರಿದ್ದಾರೆ. ತಮ್ಮ ಅಕೌಂಟ್‌ನಿಂದ ಪ್ರೊಡಕ್ಷನ್‌ ಹೌಸ್‌ ಹಾಗೂ ಪತ್ನಿ ಪ್ರಗತಿ ಶೆಟ್ಟಿಯನ್ನು ಮಾತ್ರ ಫಾಲೋ ಮಾಡ್ತಿದ್ದಾರೆ.

ರಿಷಬ್ ಶೆಟ್ಟಿ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 1.7 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಈವರೆಗೆ ಅವರು 453 ಪೋಸ್ಟ್‌ಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನೇರವಾಗಿ ಇನ್‌ಸ್ಟಾಗ್ರಾಮ್ ಅಕೌಂಟ್ ಹ್ಯಾಂಡಲ್ ಮಾಡ್ತಿಲ್ಲ. 15 ದಿನಗಳ ಹಿಂದೆ ರಿಷಬ್ 140ಕ್ಕೂ ಅಧಿಕ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಫಾಲೋ ಮಾಡುತ್ತಿದ್ದರು. ಈಗ ಆ ಸಂಖ್ಯೆ 3ಕ್ಕೆ ಇಳಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !