ಹೊಸದಿಗಂತ ವರದಿ ಶಿವಮೊಗ್ಗ :
ಕಾಡಿನಿಂದ ಬಂದ ಕರಡಿಯೊಂದು ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದ ಕಾಂಪೌಂಡ್ ಹಾರಿ ಒಳಗೆ ಸೇರಿಕೊಂಡು ಆತಂಕ ಸೃಷ್ಟಿಸಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಕರಡಿ ಸೆರೆ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ. ಸೋಮವಾರ ಬೆಳಗ್ಗೆ ಕರಡಿ ಕಾಂಪೌಂಡ್ ಹಾರಿ ನಿಲ್ದಾಣದ ಒಳಗೆ ಹೋಗಿರುವುದನ್ನು ಕಂಡ ನಿವಾಸಿಗಳು ವಿಮಾನ ನಿಲ್ದಾಣದ ಸ್ಬಿಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಜಾಗೃರಾದ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕರಡಿ ಪತ್ತೆ ಕಾರ್ಯಕ್ಕೆ ಮುಂದಾದರು.
ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಊರಿನ ನಿವಾಸಿಗಳು ಕರಡಿ ಬಂದಿರುವುದನ್ನು ವಿಡಿಯೋ ಮಾಡಿಕೊಂಡಿರುವುದರಿಂದ ಕರಡಿ ನಿಲ್ದಾಣದ ಒಳಗೆ ಸೇರಿಕೊಂಡಿರುವುದು ಖಾತರಿಯಾಗಿತ್ತು. ನಿಲ್ದಾಣದ ಒಳಗೆ ಪೊದೆ ಬೆಳೆದಿರುವುದರಿಂದ ಕರಡಿ ಅಲ್ಲೆ ಅವಿತಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.
ವಿಮಾನ ನಿಲ್ದಾಣ ಪ್ರದೇಶದ ಪೊದೆ ಬೆಳೆದ ಪ್ರದೇಶದಲ್ಲಿ ಕರಡಿ ಅವಿತುಕೊಂಡಿತ್ರು. ಅದನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇದರಿಂದ ಆತಂಕ ನಿವಾರಣೆ ಆಗಿದೆ.



