ಜೀವನವನ್ನು ಬದಲಿಸಲು ಯಾವಾಗಲೂ ದೊಡ್ಡ ಅವಕಾಶಗಳೇ ಬೇಕು ಅನ್ನೋದಿಲ್ಲ. ಕೆಲವೊಮ್ಮೆ ಒಂದು ಸಣ್ಣ ನಿರ್ಧಾರವೇ ಸಾಕು. ಅದಕ್ಕೂ ಜೊತೆ ಒಂದು ಗಟ್ಟಿಯಾದ ನಂಬಿಕೆ ಇದ್ದರೆ, ನಮ್ಮ ದಾರಿ ಸಂಪೂರ್ಣವಾಗಿ ಬದಲಾಗಬಹುದು.
ನಾವು ಹಲವಾರು ಬಾರಿ “ನಂತರ ನೋಡೋಣ”, “ಇನ್ನೂ ಸ್ವಲ್ಪ ಸಮಯ ಇದೆ” ಎಂದು ನಮ್ಮ ಕನಸುಗಳನ್ನು ಮುಂದೂಡುತ್ತೇವೆ. ಆದರೆ ಜೀವನದಲ್ಲಿ ಬದಲಾವಣೆ ಬರುತ್ತದೆ ಎಂದರೆ ಅದು ಹೊರಗಿನ ಪರಿಸ್ಥಿತಿಯಿಂದಲ್ಲ ನಮ್ಮೊಳಗಿನ ನಿರ್ಧಾರದಿಂದ. ಒಂದು ದಿನ ನಾವು ನಮ್ಮನ್ನೇ ಕೇಳಿಕೊಳ್ಳುತ್ತೇವೆ: “ಇನ್ನು ಹೀಗೆ ಅಲ್ಲ… ಏನಾದ್ರೂ ಬದಲಿಸಬೇಕು.” ಇದೇ ಕ್ಷಣವೇ ಹೊಸ ಆರಂಭ.
ಇದನ್ನೂ ಓದಿ:
ಆ ನಿರ್ಧಾರ ದೊಡ್ಡದಾಗಿರಬೇಕೆಂದಿಲ್ಲ. ಬೆಳಗ್ಗೆ ಬೇಗ ಎದ್ದು ದಿನವನ್ನು ಹೊಸ ರೀತಿಯಲ್ಲಿ ಆರಂಭಿಸುವುದು, ಹೊಸ ಕೌಶಲ್ಯ ಕಲಿಯುವುದು, ಟಾಕ್ಸಿಕ್ ಸಂಬಂಧದಿಂದ ದೂರವಾಗುವುದು, ಅಥವಾ ನಮ್ಮ ಮೇಲೆ ನಾವು ನಂಬಿಕೆ ಇಡುವುದು ಇವುಗಳಲ್ಲಿ ಯಾವುದಾದರೂ ಒಂದು ನಿರ್ಧಾರ ಜೀವನದ ದಿಕ್ಕು ಬದಲಿಸಬಹುದು. ಪ್ರಯತ್ನಿಸಿ ನೋಡಿ.
ಆದರೆ ನಿರ್ಧಾರ ಮಾತ್ರ ಸಾಕಾಗೋದಿಲ್ಲ. ಅದಕ್ಕೆ ನಂಬಿಕೆ ಜೊತೆಯಾಗಬೇಕು. “ನನಗೆ ಆಗುತ್ತದೆ” ಅನ್ನೋ ಒಂದು ಮಾತು ನಮ್ಮೊಳಗೆ ಎಷ್ಟು ಶಕ್ತಿ ತುಂಬುತ್ತದೆ ಗೊತ್ತಾ? ಇದೇ ನಂಬಿಕೆ ಕಷ್ಟದ ಸಮಯದಲ್ಲೂ ನಮ್ಮನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ.
ಹೀಗಾಗಿ ನೆನಪಿಟ್ಟುಕೊಳ್ಳಿ, ಜೀವನವನ್ನು ಬದಲಿಸುವುದು ಅದೃಷ್ಟ ಅಲ್ಲ. ಒಂದು ಸ್ಪಷ್ಟ ನಿರ್ಧಾರ ಮತ್ತು ನಮ್ಮ ಮೇಲಿನ ನಂಬಿಕೆ.
ಒಮ್ಮೆ ಧೈರ್ಯವಾಗಿ ನಿರ್ಧಾರ ತೆಗೆದುಕೊಳ್ಳಿ…
ಜೀವನವೇ ಹೇಗೆ ಹೊಸ ದಿಕ್ಕು ಹಿಡಿಯುತ್ತೆ ಅನ್ನೋದನ್ನು ನೀವು ತಾನೇ ನೋಡುತ್ತೀರಾ.



