March 31, 2026
Tuesday, March 31, 2026
spot_img

ಚಲಿಸುತ್ತಿದ್ದ ಬಸ್ ನಿಂದ ಕೆಳಕ್ಕುರುಳಿದ ವಿದ್ಯಾರ್ಥಿಗಳು: ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಲಿಸುತ್ತಿದ್ದ ಬಸ್ ನಿಂದ ವಿದ್ಯಾರ್ಥಿಗಳಿಬ್ಬರು ಹೊರಗೆಸೆಯಲ್ಪಟ್ಟ ಘಟನೆ ಬೆಳ್ತಂಗಡಿಯ ಕಳಿಯ ಗ್ರಾಮದ ರೇಷ್ಮೆರೋಡ್‌ ಎಂಆರ್‌ಪಿಎಲ್‌ ಪೆಟ್ರೋಲ್‌ ಪಂಪ್‌ ಬಳಿ ನಡೆದಿದೆ ಎನ್ನಲಾಗಿದ್ದು, ಈ ಬಗೆಗಿನ ಸಿಸಿ ಟೀವಿ ದೃಶ್ಯಾವಳಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೂಲಗಳ ಮಾಹಿತಿ ಪ್ರಕಾರ ಈ ವಿದ್ಯಾರ್ಥಿಗಳು ಒಂದೇ ಮನೆಯವರು ಎಂದು ಹೇಳಲಾಗಿದೆ. ಇವರು ಪರೀಕ್ಷೆ ಬರೆಯಲು ಹೊರಟಿದ್ದರು. ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಬಸ್‌ ಹತ್ತಿದ್ದರು. ರೇಷ್ಮೆ ರೋಡ್‌ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಭಯಾನಕ ದೃಶ್ಯ ವೈರಲ್‌ ಆಗಿದ್ದು, ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !