March 31, 2026
Tuesday, March 31, 2026
spot_img

ಆನ್​ಲೈನ್ ನಲ್ಲಿ ಪೋಸ್ಟ್ ಮಾಡೋವಾಗ ಹುಷಾರ್: ನಿಮ್ಮ ಮೇಲೂ ಒಂದು ಕಣ್ಣಿಟ್ಟಿದೆ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಜಿಟಲ್ ಜಗತ್ತಿನಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿ ಮತ್ತು ಸೂಕ್ಷ್ಮ ವಿಷಯಗಳ ಹಂಚಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ 2021ರ ಐಟಿ ನಿಯಮಗಳಲ್ಲಿ ಮತ್ತೊಂದು ಮಹತ್ವದ ತಿದ್ದುಪಡಿ ಕರಡು ಬಿಡುಗಡೆ ಮಾಡಿದೆ. ಈ ಹೊಸ ಪ್ರಸ್ತಾವಿತ ನಿಯಮಗಳು ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಪ್ಲಾಟ್‌ಫಾರ್ಮ್‌ಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಕರಡು ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವ ಸುದ್ದಿ, ಪ್ರಸ್ತುತ ವಿದ್ಯಮಾನಗಳು ಅಥವಾ ಸೂಕ್ಷ್ಮ ವಿಷಯಗಳ ಪೋಸ್ಟ್‌ಗಳ ಮೇಲೆ ಸರ್ಕಾರ ನೇರವಾಗಿ ಗಮನಹರಿಸಬಹುದು. ಅಗತ್ಯವಿದ್ದರೆ ಸಾಮಾನ್ಯ ಬಳಕೆದಾರರಿಗೂ ನೇರ ನೋಟಿಸ್ ಕಳುಹಿಸುವ ಅವಕಾಶ ಇರಬಹುದು ಎಂದು ತಿಳಿಸಲಾಗಿದೆ. ವಿಶೇಷವಾಗಿ ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಎಕ್ಸ್ ಮುಂತಾದ ವೇದಿಕೆಗಳಲ್ಲಿ ಹಂಚುವ ಅಭಿಪ್ರಾಯಗಳು ಹೆಚ್ಚಿನ ಪ್ರಭಾವ ಬೀರುವ ಹಿನ್ನೆಲೆ ಈ ಕ್ರಮ ಮಹತ್ವ ಪಡೆದಿದೆ.

ಇದನ್ನೂ ಓದಿ:

ಇದೇ ವೇಳೆ, ಸರ್ಕಾರ ನೀಡುವ ಸೂಚನೆಗಳು ಇನ್ನು ಮುಂದೆ ಕೇವಲ ಮಾರ್ಗಸೂಚಿಗಳಷ್ಟೇ ಅಲ್ಲದೆ ಕಾನೂನಾತ್ಮಕವಾಗಿ ಕಡ್ಡಾಯ ಪಾಲನೆಯ ನಿಯಮಗಳಾಗಲಿವೆ. ಈ ಸೂಚನೆಗಳನ್ನು ಪಾಲಿಸದ ಪ್ಲಾಟ್‌ಫಾರ್ಮ್‌ಗಳು ‘ಸೇಫ್ ಹಾರ್ಬರ್’ ರಕ್ಷಣೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಗಮನಾರ್ಹವಾಗಿ, ಪೋಸ್ಟ್‌ಗಳನ್ನು ತೆಗೆದುಹಾಕುವ ಅವಧಿಯನ್ನು ಈಗಾಗಲೇ 36 ಗಂಟೆಯಿಂದ ಕೇವಲ 3 ಗಂಟೆಗೆ ಇಳಿಸಲಾಗಿದೆ. ಹೊಸ ಕರಡು ಬಗ್ಗೆ ಸಾರ್ವಜನಿಕರಿಂದ ಏಪ್ರಿಲ್ 14ರವರೆಗೆ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ಈ ಬದಲಾವಣೆಗಳು ಜಾರಿಯಾದರೆ, ದೇಶದ ಡಿಜಿಟಲ್ ವಲಯದಲ್ಲಿ ದೊಡ್ಡ ಮಟ್ಟದ ನಿಯಂತ್ರಣ ಬದಲಾವಣೆ ಕಾಣುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !